Wednesday, January 22, 2025

ಕಿಚ್ಚ ಸುದೀಪ್ 47ನೇ ಸಿನಿಮಾಗೆ ಶ್ರೀನಿಧಿ ಶೆಟ್ಟಿ ನಾಯಕಿ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಸರ್ ಪ್ರೈಸ್ ಕೊಟ್ಟಿದ್ದಾರೆ.

ಇಂದು ಕೆಜಿಎಫ್ ರೀನಾ ಉರೂಫ್ ಶ್ರೀನಿಧಿ ಅವರ ಬರ್ತ್‌ಡೇ. ಆ ಪ್ರಯುಕ್ತ ಅಭಿಮಾನಿಗಳಿಗೆ ಸತ್ಯ ಜ್ಯೋತಿ ಪಿಕ್ಚರ್ಸ್‌ ಸರ್ಪ್ರೈಸ್‌ ನೀಡಿದೆ. ತಮಿಳಿನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಪಿಕ್ಚರ್ಸ್‌, ಕಿಚ್ಚ ಸುದೀಪ್‌ ಅವರ #K47 ಚಿತ್ರಕ್ಕೆ ನಾಯಕಿಯನ್ನು ಘೋಷಣೆ ಮಾಡುವ ಮೂಲಕ ಶ್ರೀನಿಧಿಯನ್ನು ತಂಡಕ್ಕೆ ಸ್ವಾಗತಿಸಿದೆ.

ಕಿಚ್ಚನ 47ನೇ ಚಿತ್ರವನ್ನು ಚೇರನ್‌ ನಿರ್ದೇಶನ ಮಾಡಲಿದ್ದಾರೆ. ಚೇರನ್‌ ತಮಿಳಿನಲ್ಲಿ ಆಟೋಗ್ರಾಫ್‌ ಚಿತ್ರ ನಿರ್ದೇಶಿಸಿದ್ದರು. ಅದೇ ಚಿತ್ರವನ್ನು ಸುದೀಪ್‌, ಕನ್ನಡಕ್ಕೆ ಮೈ ಆಟೋಗ್ರಾಫ್‌ ಹೆಸರಲ್ಲಿ ರಿಮೇಕ್‌ ಮಾಡಿದ್ದರು. ಇದೀ ಕಿಚ್ಚ-ಚೇರನ್ ಹಾಗೂ ಸತ್ಯ ಜ್ಯೋತಿ ಪಿಕ್ಚರ್ಸ್  ಸಂಗಮದ ಈ ಚಿತ್ರದಲ್ಲಿ ಶ್ರೀನಿಧಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಕಿಚ್ಚನಿಗೆ ಶ್ರೀನಿಧಿ ಜೋಡಿಯಾಗಿ ನಟಿಸಲಿದ್ದಾರೆ. ಸದ್ಯ ಸುದೀಪ್ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ #ಕಿಚ್ಚ 47 ಪ್ರಾಜೆಕ್ಟ್ ಟೇಕಾಫ್ ಆಗಲಿದೆ.

ಕಿಚ್ಚನ ಪಕ್ಕದಲ್ಲಿ ನಿಲ್ಲುವ ಬಂಪರ್ ಚಾನ್ಸ್

ಕೆಜಿಎಫ್‌ ಸಿನಿಮಾ ಮೂಲಕ ಇಡೀ ಇಂಡಿಯನ್ ಸಿನಿ ಲೋಕಕ್ಕೆ ಶ್ರೀನಿಧಿ ಪರಿಚಿತರಾಗಿದ್ದಾರೆ. ಕೆಜಿಎಫ್‌, ಚಾಪ್ಟರ್‌ 2 ಬಳಿಕ ತಮಿಳಿನ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಮೇಲೆ ಬೇರಾವ ಸಿನಿಮಾ ಒಪ್ಪಿಕೊಳ್ಳದ  ಶ್ರೀನಿಧಿ, ಇತ್ತೀಚೆಗಷ್ಟೇ ತೆಲುಸು ಕದಾ ಹೆಸರಿನ ತೆಲುಗು ಚಿತ್ರಕ್ಕೂ ಆಯ್ಕೆ ಆಗಿದ್ದರು. ಇದೀಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಕಿಚ್ಚನ ಪಕ್ಕದಲ್ಲಿ ನಿಲ್ಲುವ ಬಂಪರ್ ಚಾನ್ಸ್ ತಮ್ಮದಾಗಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES