Thursday, December 19, 2024

‘ಪಂಚ’ ರಾಜ್ಯಗಳ ಚುನಾವಣೆ : 5 ರಾಜ್ಯ, 35 ಸಮಾರಂಭಗಳು, ಮೋದಿ ಅಬ್ಬರದ ಪ್ರಚಾರ

ನವದೆಹಲಿ : ದೇಶದಾದ್ಯಂತ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಪ್ರಧಾನಿ ಮೋದಿ 35 ರಾಜಕೀಯ ರ್ಯಾಲಿಯಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಈ ವಿಷಯವನ್ನು ಪ್ರಕಟಿಸಿದೆ. ಈ ಬಾರಿಯ ಚುನಾವಣೆಗೆ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೋಸ್ಟರ್ ಬಾಯ್ ಮಾಡಿದೆ.

ಪ್ರಧಾನಿ ಮೋದಿ ಅವರು ಐದು ರಾಜ್ಯಗಳಲ್ಲಿ ಒಟ್ಟು 34 ರಿಂದ 35 ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಒಟ್ಟು 11, ರಾಜಸ್ಥಾನದಲ್ಲಿ 10, ತೆಲಂಗಾಣ ಮತ್ತು ಛತ್ತೀಸ್​ಗಢದಲ್ಲಿ ತಲಾ 6, ಹಾಗೂ ಮಿಜೋರಾಂನಲ್ಲಿ ಒಂದು ರ್ಯಾಲಿಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಬಹಿರಂಗಪಡಿಸಿವೆ.

ಪಂಚ ರಾಜ್ಯಗಳ ಚುನಾವಣೆ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‍ಕುಮಾರ್ ಅವರು ಪಂಚ ರಾಜ್ಯಗಳಲ್ಲಿ ಚುನಾವಣಾ ದಿನಾಂಕಗಳನ್ನು ಘೋಷಣೆ ಮಾಡಿದ್ದಾರೆ. 90 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ನಕ್ಸಲ್‍ಪೀಡಿತ ಛತ್ತೀಸ್‍ಗಢ, 230 ವಿಧಾನಸಭಾ ಕ್ಷೇತ್ರ ಹೊಂದಿರುವ ಮಧ್ಯಪ್ರದೇಶ, 200 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಜಸ್ತಾನ, 40 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಿಜೊರಾಂ ಮತ್ತು 119 ಕ್ಷೇತ್ರಗಳನ್ನು ಒಳಗೊಂಡಿರುವ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ.

RELATED ARTICLES

Related Articles

TRENDING ARTICLES