Sunday, December 22, 2024

ಆಂಗ್ಲರಿಗೆ ಹೀನಾಯ ಸೋಲು.. ದಕ್ಷಿಣ ಆಫ್ರಿಕಾಗೆ 229 ರನ್​ಗಳ ಭರ್ಜರಿ ಜಯ

ಬೆಂಗಳೂರು : ಹಾಲಿ ಚಾಂಪಿಯನ್ ಇಂಗ್ಲೆಂಡ್​ ಈ ಬಾರಿಯ ವಿಶ್ವಕಪ್-2023 ಟೂರ್ನಿಯಲ್ಲಿ ಮತ್ತೊಮ್ಮೆ ಹೀನಾಯ ಸೋಲು ಕಂಡಿದೆ.

ಮುಂಬೈನ್ ವಾಂಖಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ವಿರುದ್ಧ ನಡೆದ ವಿಶ್ವಕಪ್​ನ 20ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 229 ರನ್​ಗಳ ಅಮೋಘ ಗೆಲುವು ದಾಖಲಿಸಿತು.

ದಕ್ಷಿಣ ಆಫ್ರಿಕಾ ನೀಡಿದ್ದ 400 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ಬೆನ್ನಟ್ಟಿದ ಇಂಗ್ಲೆಂಡ್ 22 ಓವರ್​ಗಳಲ್ಲಿ ಕೇವಲ 170 ರನ್​ಗಳಿಗೆ ಆಲೌಟ್​ ಆಯಿತು. ಮೊನ್ನೆ ಅಫ್ಘಾನಿಸ್ತಾನದ ವಿರುದ್ಧ ಸೋಲು ಕಂಡಿದ್ದ ಆಂಗ್ಲರು ಇಂದು ಹರಿಣಗಳ ವಿರುದ್ಧವೂ ಹೀನಾಯ ಸೋಲು ಕಂಡರು. ಇನ್ನೂ ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಈ ಬಾರಿಯ ವಿಶ್ವಕಪ್​ನಲ್ಲಿ ದೊಡ್ಡ ಗೆಲುವು ಸಾಧಿಸಿತು.

ಕ್ಲಾಸೆನ್, ಜಾನ್ಸೆನ್ ಬೊಂಬಾಟ್ ಆಟ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ಬೌಲರ್​ಗಳ ಬೆವರಿಳಿಸಿತು. ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 399 ರನ್​ ಚಚ್ಚಿತು. ಹರಿಣಗಳ ಪರ ಕ್ಲಾಸೆನ್ ಹಾಗೂ ಜಾನ್ಸೆನ್ ಕ್ಲಾಸ್ ಇನ್ನಿಂಗ್ಸ್ ಆಡಿದರು. ಕ್ಲಾನೆಸ್ 67 ಎಸೆತಗಳಲ್ಲಿ 4 ಬೊಂಬಾಟ್ ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 109 ರನ್​ ಚಚ್ಚಿದರು. ಹೆಂಡ್ರಿಕ್ಸ್ 85, ಮಾರ್ಕೊ ಜಾನ್ಸೆನ್ ಅಜೇಯ 75, ಡಸ್ಸನ್ 60 ಹಾಗೂ ಮಾಕ್ರಮ್ 42 ರನ್ ಸಿಡಿಸಿದರು.

RELATED ARTICLES

Related Articles

TRENDING ARTICLES