Wednesday, January 22, 2025

ಭೀಮಾ ತೀರದಲ್ಲಿ ಹರಿದ ನೆತ್ತರು..! ಸರಣಿ ಕೊಲೆಗೆ ಬೆಚ್ಚಿ ಬಿದ್ದ ಕಲಬುರಗಿ ಜನತೆ

ಕಲಬುರಗಿ : ಭೀಮಾತೀರದಲ್ಲಿ ಕೊಲೆಗಳ ಮೇಲೆ ಕೊಲೆಗಳಾಗುತ್ತಿದ್ದು, ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹಳೆ ದ್ವೇಷಕ್ಕೆ ಹೆಣಗಳ ಮೇಲೆ ಹೆಣಗಳು ಉರುಳುತ್ತಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷನ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಯುವಕನೋರ್ವ ಕೊಲೆಯಾಗಿ ಹೋಗಿದ್ದಾನೆ.

ಭೀಮಾತೀರದಲ್ಲಿ ಕೊಲೆಗಳ ಸರಣಿ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಅಫಜಲಪುರ ತಾಲೂಕಿನ ಚೌಡಾಪುರ ಬಳಿ ಮದರಾ ಬಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌಡಪ್ಪಗೌಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ರು. ಈ ಘಟನೆ ಮಾಸುವ ಮುನ್ನವೇ ಇದೀಗ ಅಫಜಲಪುರದಲ್ಲಿ ಯುವಕನ ಬರ್ಬರ ಕೊಲೆಯಾಗಿದೆ.

ಬಲಭೀಮ ಸಗರ್ (23) ಮೃತ ಯುವಕ. ಈತ ಅಫಜಲಪುರ ತಾಲೂಕಿನ ಸಿಧನೂರು ಗ್ರಾಮದ ನಿವಾಸಿ. ಕಲಬುರಗಿಯಲ್ಲಿ ITI ಓದುತಿದ್ದ ಬಲಭೀಮ್, ದಸರಾ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ತನ್ನ ಸ್ವಂತ ಊರಾದ ಅಫಜಲಪುರ ತಾಲೂಕಿನ ಸಿಧನೂರು ಗ್ರಾಮಕ್ಕೆ ಹೋಗಿದ್ದ. ಹಬ್ಬಕ್ಕೆಂದು ಬಂದವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಇನ್ನು ಬಲಭೀಮ್ ಭೀಕರ ಹತ್ಯೆಗೆ ಕಾರಣ ಹಳೆ ವೈಷಮ್ಯ ಎಂಬುದು ತಿಳಿದು ಬಂದಿದೆ.

ಕುಡಿದ ಮತ್ತಿನಲ್ಲಿ ಕುಟುಂಬಸ್ಥರಿಗೆ ಬೈದಿದ್ದ

ಕಳೆದ ಒಂದು ವರ್ಷದ ಹಿಂದೆ ಅಫಜಲಪುರ ಬಸ್ ಡಿಪೋದಲ್ಲಿ KKRTC ಬಸ್ ಚಾಲಕನಾಗಿದ್ದ ಶಿವಶರಣ ಹೇರೂರ ಎಂಬಾತನ ಕೊಲೆಯಾಗಿತ್ತು. ಬಲಭೀಮನೇ ಕೊಲೆ ಮಾಡಿದ್ದು ಅಂತಾ ಮೃತ ಶಿವಶರಣ ಕುಟುಂಬಸ್ಥರು ದೂರು ನೀಡಿದ್ದರು. ಈ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಬಲಭೀಮ್​​​ ಮೂರು ತಿಂಗಳ ಹಿಂದಷ್ಟೇ ಜಾಮೀನು ಪಡೆದು ಹೊರಗೆ ಬಂದಿದ್ದ. ಇನ್ನು ಕುಡಿದ ಮತ್ತಿನಲ್ಲಿ ಬಲಭೀಮ್, ಶಿವಶರಣನ ಕುಟುಂಬಸ್ಥರಿಗೆ ಬೈದಿದ್ದಾನೆ. ಈ ಹಿನ್ನೆಲೆ ​ಶಿವಶರಣ ಸಂಬಂಧಿಗಳಾದ ಯಲ್ಲಪ್ಪಾ, ಮಾಳಪ್ಪ, ಮತ್ತು ಹೊನ್ನಪ್ಪ ಅನ್ನೋರು ಬಲಭೀಮ್‌ನನ್ನು ಕೊಲೆ ಮಾಡಿದ್ದಾರೆ.

ಇನ್ನು ಬಲಭೀಮ್​ನನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು ನಂತರ ತಾವೇ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ರೇವೂರ್ ಬಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES