ಶಿವಮೊಗ್ಗ : ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೊಡುಗೆ ಏನು? ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರನ್ನು ನಂಬಿ ಒಬ್ಬನಾದರೂ ಶಾಸಕ ಬಿಜೆಪಿಗೆ ಬಂದಿದ್ದಾನಾ? ಈಶ್ವರಪ್ಪ ಅವರಿಗೆ ಅಂತಹ ಶಕ್ತಿ, ಸಾಮರ್ಥ್ಯ ಇಲ್ಲ. ಅಪ್ರಬುದ್ದ ರಾಜಕಾರಣಿಗಳಲ್ಲಿ ಈಶ್ವರಪ್ಪ ಕೂಡ ಒಬ್ಬರು. ಬೇಜವಾಬ್ದಾರಿ ಮಾತನಾಡುವ ಈಶ್ವರಪ್ಪ ಅವರಿಂದ ಪಕ್ಷಕ್ಕೆ ನಷ್ಟ. ಹೀಗಾಗಿಯೇ ಈಶ್ವರಪ್ಪ ಅವರನ್ನು ಪಕ್ಷ ಎಲ್ಲಾ ಹುದ್ದೆಯಿಂದ ದೂರ ಇಟ್ಟಿದೆ ಎಂದು ಕುಟುಕಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಈಶ್ವರಪ್ಪ ಅವರಿಗಿಲ್ಲ. ನೀರಾವರಿ ಸಚಿವರಾಗಿದ್ದರು ಒಂದೇ ಒಂದು ದಿನ ಕಾವೇರಿ ಸಮಸ್ಯೆ ಬಗ್ಗೆ ಮಾತನಾಡುವ ಪ್ರೌಢಿಮೆ ಇಲ್ಲ. ಎಲ್ಲರನ್ನು ಏಕವಚನದಲ್ಲಿ ಮಾತನಾಡೋದು, ಬಹುವಚನ ಎನ್ನೋದು ಗೊತ್ತೆ ಇಲ್ಲ. ಈಶ್ವರಪ್ಪ ಅವರ ಮಾತಿಗೆ ಅಷ್ಟು ಮನ್ನಣೆ ಇಲ್ಲ. ಅವರದ್ದು ಹರುಕುಬಾಯಿ ಎಂಬುದು ಜಗಜ್ಜಾಹೀರು. ಎಲ್ಲಾ ಇಲಾಖೆಗಳಲ್ಲೂ ಗುಡಿಸಿ ಗುಂಡಾಂತರ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.