Wednesday, January 22, 2025

Israel Hamas War : ಇಸ್ರೇಲ್-ಹಮಾಸ್ ಯುದ್ದ ನಿಲ್ಲಿಸಿ ಎಂದು ಪ್ರತಿಭಟನೆ

ಮಂಡ್ಯ : ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ದವನ್ನ ನಿಲ್ಲಿಸಿ, ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಂಡ್ಯದ ಮಹಾವೀರ ವೃತ್ತದಲ್ಲಿ ಸಿಪಿಎಂ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಇಸ್ರೇಲ್ ಪ್ಯಾಲೆಸ್ತೇನಿನ ಮೇಲೆ ಯುದ್ಧ ಮಾಡುತ್ತಿರುವುದು ಖಂಡನೀಯ. ಪ್ಯಾಲೆಸ್ತೇನಿಯರ ಮೇಲೆ ಯುದ್ದ ಮಾಡುತ್ತಿರುವುದರಿಂದ ಅಲ್ಲಿನ ಮಕ್ಕಳು, ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಇಸ್ರೇಲ್​​ಗೆ ಮುಂದುವರಿದ ದೇಶಗಳು ಸಾಥ್ ನೀಡುತ್ತಿರುವುದು ಖಂಡನೀಯ. ಹೀಗಾಗಿ ಕೂಡಲೇ ಯುದ್ದ ನಿಲ್ಲಿಸಿ ಶಾಂತಿ ಕಾಪಾಡುವ ಮೂಲಕ ಪ್ಯಾಲೆಸ್ತೀನಿನಲ್ಲಿ ಅಮಾಯಕರ ಜೀವ ಉಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ವಿಜಯದಶಮಿ ಪ್ರಯುಕ್ತ ಆಟೋ ರ್ಯಾಲಿ

ವಿಜಯದಶಮಿ ಪ್ರಯುಕ್ತ ದಾವಣಗೆರೆಯಲ್ಲಿ ಆಟೋ ರ್ಯಾಲಿ ನಡೆಸಲಾಯಿತು. ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ರ್ಯಾಲಿ ಮಾಡಲಾಯಿತು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ  ಲೋಕಿಕೆರೆ ನಾಗರಾಜ್​ ರ್ಯಾಲಿಗೆ ಚಾಲನೆ ನೀಡಿದರು.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಿಂದ ಶುರುವಾದ ಬೃಹತ್ ಆಟೋ ರ್ಯಾಲಿ, ಪಿಬಿ ರಸ್ತೆ, ಎವಿಕೆ ಕಾಲೇಜ್ ರಸ್ತೆ, ವಿನೋಬಾ ನಗರ, ಹಳೇ ದಾವಣಗೆರೆಯ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು. ರ್ಯಾಲಿಯಲ್ಲಿ ನೂರಾರು ಆಟೋಗಳು ಪಾಲ್ಗೊಂಡಿದ್ದವು.

RELATED ARTICLES

Related Articles

TRENDING ARTICLES