Monday, December 23, 2024

ಸಾಲ ಬಾಧೆ : ನೇಣು ಹಾಕಿಕೊಂಡು ರೈತ ಆತ್ಮಹತ್ಯೆ

ಹುಬ್ಬಳ್ಳಿ : ಸಾಲ ಬಾಧೆ ತಾಳಲಾಗದೇ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ಚಾಕಲಬ್ಬಿ ಗ್ರಾಮದಲ್ಲಿ ನಡೆದಿದೆ.

ಯಲ್ಲಪ್ಪ ಬಹದ್ದೂರಪ್ಪ ಪೂಜಾರ (68) ಆತ್ಮಹತ್ಯೆ ಮಾಡಿಕೊಂಡ ಅನ್ನದಾತ. ಅಕಾಲಿಕ ಮಳೆಯಿಂದಾಗಿ ನಿರೀಕ್ಷೆಗಿಂತ ಕಡಿಮೆ ಬೆಳೆ ಬಂದ ಹಿನ್ನಲೆ ರೈತ ಯಲ್ಲಪ್ಪ ಮನನೊಂದಿದ್ದರು ಎನ್ನಲಾಗಿದೆ.

ಕೃಷಿಗಾಗಿ ಕೆನರಾ ಬ್ಯಾಂಕಿನಲ್ಲಿ ಮೂರು ಲಕ್ಷ ರೂಪಾಯಿ ಹಾಗೂ ಕೈಗಡ 2 ಲಕ್ಷ ಸಾಲ ಮಾಡಿಕೊಂಡಿದ್ದರು. ಟ್ರ್ಯಾಕ್ಟರ್ ಸಾಲ 4.50 ಲಕ್ಷ ಮಾಡಿದ್ದರು. ಮಳೆ ಬಾರದೆ ಬೆಳೆಯಲ್ಲ ಹಾಳಾಗಿದ್ದು ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಕುಂದಗೋಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES