Sunday, November 3, 2024

ಪಾಕ್​ಗೆ ಹೀನಾಯ ಸೋಲು.. ಆಸಿಸ್​ಗೆ 62 ರನ್​ಗಳ ಭರ್ಜರಿ ಗೆಲುವು

ಬೆಂಗಳೂರು : ಆಸಿಸ್​ ವಿರುದ್ಧ ಪಾಕ್​ ಹೀನಾಯ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಆಸಿಸ್​ ಎರಡನೇ ಗೆಲುವು ಸಾಧಿಸಿದರೆ, ಪಾಕಿಸ್ತಾನ ಎರಡನೇ ಸೋಲು ಕಂಡಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ನ 18ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಸ್ಟ್ರೇಲಿಯಾ 62 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 367 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ 368 ರನ್​ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ 305 ರನ್​ಗಳಿಗೆ ಸರ್ವಪತನ ಕಂಡಿತು. ಪಾಕ್ ವಿರುದ್ಧ ಇಮಾಮ್ 70, ಶಫೀಕ್ 64 ಹಾಗೂ ರಿಜ್ವಾನ್ 46 ರನ್ ಸಿಡಿಸಿದರು. ಆಸಿಸ್​ ಪರ ಆಡಂ ಝಂಪಾ 4, ಕುಮಿನ್ಸ್ ಹಾಗೂ ಸ್ಟೋನಿಶ್ ತಲಾ ಎರಡು ವಿಕೆಟ್ ಪಡೆದರು.

ವಾರ್ನರ್ ದಾಖಲೆ ಆಟ

ಆಸಿಸ್ ಬ್ಯಾಟರ್ ಡೇವಿಡ್ ವಾರ್ನರ್ ದಾಖಲೆ ಸೃಷ್ಟಿಸಿದರು. ಪಾಕ್ ವಿರುದ್ಧ ಶತಕ ಸಿಡಿಸಿದ ವಾರ್ನರ್ 163 ಗಳಿಸಿ ಔಟಾದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅವರು 7ನೇ ಬಾರಿ 150+ ರನ್​ ಗಳಿಸಿದ್ದಾರೆ. ವಾರ್ನರ್​ ಅವರಿಗಿಂತ ಮೊದಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ (8 ಬಾರಿ) ಈ ಸಾಧನೆ ಮಾಡಿದ್ದಾರೆ. ಆದರೆ, ವಿಶ್ವಕಪ್​ನಲ್ಲಿ ವಾರ್ನರ್ ಈ ಸಾಧನೆ ಮಾಡಿದ್ದು ಇದು ಮೂರನೇ ಬಾರಿ ಎಂಬುದು ವಿಶೇಷ.

RELATED ARTICLES

Related Articles

TRENDING ARTICLES