Monday, December 23, 2024

ಪೌರಾಯುಕ್ತರ ಕಾಲಿಗೆ ಬಿದ್ದ ನಗರಸಭೆ ಸದಸ್ಯನ ಹೈಡ್ರಾಮಾ

ಬೀದರ್ : ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ವಿಚಾರವಾಗಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಬೊಕ್ಕೆ, ಪೌರಾಯುಕ್ತ ಮನೋಜ್ ಕಾಂಬ್ಳೆ ಕಾಲಿಗೆ ಬಿದ್ದು ಹೈಡ್ರಾಮಾ ಮಾಡಿದ್ದಾರೆ.

ಸುಸಜ್ಜಿತ ರಸ್ತೆಗಳ ಮೇಲೆ ಕಾಮಗಾರಿ ಮಾಡಿ ಅನಗತ್ಯವಾಗಿ ಸಾರ್ವಜನಿಕರ ಹಣವನ್ನ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೌರಾಯುಕ್ತರ ಕಾಲಿಗೆ ಬಿದ್ದಿದ್ದಾರೆ. ನಗರದ ರಾಜಕಮಲ್ ಹೋಟೆಲ್‌ನಿಂದ ಹುಲಸೂರ ರಸ್ತೆವರೆಗೆ ನಗರಸಭೆ ವತಿಯಿಂದ ನಡೆಸುತ್ತಿರುವ ರಸ್ತೆ ಕಾಮಗಾರಿ ತಡೆಹಿಡಿದು ಬೇರೆಡೆ ಕಾಮಗಾರಿ ಮಾಡುವಂತೆ ಒತ್ತಾಯಿಸಿದ್ದಾರೆ.

ಹಣ ಪೋಲು‌ ಮಾಡಬೇಡಿ

ನಗರದ ಹಲವೆಡೆ ಸುಸಜ್ಜಿತವಾದ ರಸ್ತೆ ಮೇಲೆಯೇ ಕಾಮಗಾರಿ ಮಾಡುತ್ತಿದ್ದು, ಅಂತಹ ರಸ್ತೆ ಕಾಮಗಾರಿ‌ ತಟಸ್ಥಗೊಳಿಸಿ ದುರಸ್ಥಿ ಇರುವ ಕಡೆಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ನಗರದ ಹಲವು ಬಡಾವಣೆಗಳಲ್ಲಿ ಈಗಾಗಲೇ ಸಾಕಷ್ಟು ರಸ್ತೆಗಳು ಗುಂಡಿಮಯವಾಗಿವೆ. ಅಂತಹ ರಸ್ತೆ ಮೇಲೆ ಸಂಚರಿಸಲು ಜನರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಅಂತಹ ರಸ್ತೆಗಳನ್ನ ದುರಸ್ತಿ ಮಾಡಿ. ಅನಗತ್ಯವಾಗಿ ಸಾರ್ವಜನಿಕರ ಹಣ ಪೋಲು‌ ಮಾಡುವ ಕೆಲಸ ಮಾಡಬೇಡಿ ಎಂದು‌ ಕಾಲಿಗೆ ಬಿದ್ದಿದ್ದಾರೆ.

RELATED ARTICLES

Related Articles

TRENDING ARTICLES