Wednesday, January 22, 2025

ವಿಜಯ್ ಲಿಯೋ, ಭಗವಂತ್ ಕೇಸರಿ ಠುಸ್, ಶಿವಣ್ಣ ಘೋಸ್ಟ್ ಮತ್ತು ಟೈಗರ್ ಫೈರ್

ಬೆಂಗಳೂರು : ದಸರಾ ಬಾಕ್ಸ್ ಆಫೀಸ್ ದಂಗಲ್​​ನಲ್ಲಿ ಭಾಗಿಯಾದ ನಾಲ್ಕು ಪ್ಯಾನ್ ಇಂಡಿಯಾ ಮೂವಿಗಳಲ್ಲಿ ಎರಡು ನೆಲಕಚ್ಚಿವೆ. ಇನ್ನೆರಡು ಅಬ್ಬರಿಸಿ, ಆರ್ಭಟಿಸುತ್ತಿವೆ. ಬಾಲಯ್ಯ, ಶಿವಣ್ಣ, ವಿಜಯ್ ಹಾಗೂ ರವಿತೇಜಾರಲ್ಲಿ ಸಿಹಿ ಯಾರಿಗೆ? ಕಹಿ ಯಾರಿಗೆ ಗೊತ್ತಾ?

  • ಠುಸ್ ಆದ ಲಿಯೋ, ಭಗವಂತ್.. ಸಿಡಿದ ಘೋಸ್ಟ್ & ಟೈಗರ್
  • ಮೊದಲ ಬಾರಿ ಎಡವಿದ ಕನಕರಾಜ್, ಬಾಲಯ್ಯ ಕೂಡ ನಿಧಾನ
  • ಡಾ. ಶಿವಣ್ಣನ ಗ್ಯಾಂಗ್​ಸ್ಟರ್ ಪವರ್.. ಟೈಗರ್ ರೆಟ್ರೋ ಖದರ್
  • ದಸರಾ ಬಾಕ್ಸ್ ಆಫೀಸ್ ದಂಗಲ್​​ನಲ್ಲಿ ಬಿಗ್ ಸ್ಟಾರ್ಸ್​ ಕಾದಾಟ

ದಸರಾ ಹಬ್ಬ ಬಂದರೆ ಸಾಲು ಸೂಪರ್ ಸ್ಟಾರ್ ಸಿನಿಮಾಗಳು ಬೆಳ್ಳಿತೆರೆಗೆ ಅಪ್ಪಳಿಸುತ್ತವೆ. ಈ ಬಾರಿಯ ದಸರಾಗೂ ನಾಲ್ಕು ಬಿಗ್ ಬಜೆಟ್ ಚಿತ್ರಗಳು ತೆರೆಗಪ್ಪಳಿಸಿವೆ. ಘೋಸ್ಟ್, ಭಗವಂತ್ ಕೇಸರಿ, ಟೈಗರ್ ನಾಗೇಶ್ವರ ರಾವ್ ಹಾಗೂ ಲಿಯೋ ಸಿನಿಮಾ ಸಿನಿ ಪ್ರೇಕ್ಷಕರ ಉತ್ಸಾಹವನ್ನು ಡಬಲ್ ಮಾಡಿವೆ.

ಶಿವರಾಜ್​ಕುಮಾರ್​ ಅವರ ಘೋಸ್ಟ್ ಸಿನಿಮಾ ತೆಲುಗು ಹೊರತುಪಡಿಸಿ ವಿಶ್ವದಾದ್ಯಂತ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆಗೆ ಬಂದಿದೆ. ಶ್ರೀನಿ ನಿರ್ದೇಶನದಲ್ಲಿ ಶಿವಣ್ಣ ಮೂರು ವೆರೈಟಿ ಶೇಡ್ಸ್​​ನಲ್ಲಿ ಒರಿಜಿನಲ್ ಗ್ಯಾಂಗ್​ಸ್ಟರ್ ಪವರ್ ತೋರಿದ್ದು, ವಿಂಟೇಜ್ ಲುಕ್ಸ್​​ಗೆ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದಾರೆ. ಬಾಕ್ಸ್ ಆಫೀಸ್​​ ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿರೋ ಘೋಸ್ಟ್, ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ಗಟ್ಟಿಯಾಗಿ ನೆಲೆ ನಿಂತಿದೆ.

ಘೋಸ್ಟ್ ಜೊತೆ ಟಾಲಿವುಡ್​ನ ಟೈಗರ್ ನಾಗೇಶ್ವರರಾವ್ ಕೂಡ ದಸರಾ ವಿಶೇಷ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಾರಾಜಿಸ್ತಿದೆ. ರವಿತೇಜಾ ನಟನೆಯ ಟೈಗರ್, ಸ್ಟುವರ್ಟ್​ಪುರಂನ ದರೋಡೆಕೋರನ ಕಥೆಯಾಗಿದ್ದು, 70ರ ದಶಕದ ಮೋಸ್ಟ್ ವಾಂಟೆಟ್ ಕ್ರಿಮಿನಲ್​ನ ಕಥೆ ಎಕ್ಸ್​ಪ್ಲೋರ್ ಮಾಡಿದೆ. ಮಾಸ್ ಮಹಾರಾಜನ ಗತ್ತು, ಗಮ್ಮತ್ತಿಗೆ ಬಾಕ್ಸ್ ಆಫೀಸ್ ಶೇಕ್ ಆಗ್ತಿದ್ದು, ದೇಶಾದ್ಯಂತ ಜನ ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳಿಂದ ಸಿನಿಮಾನ ಹಾಡಿ, ಹೊಗಳುತ್ತಿದ್ದಾರೆ.

ಭಗವಂತ್ ಕೇಸರಿ ಹಾಗೂ ಲಿಯೋ ಡಲ್

ಲಿಯೋ.. ದಳಪತಿ ವಿಜಯ್ ನಟನೆಯ ಈ ಸಿನಿಮಾ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್​ ಚಿತ್ರವಾಗಿದ್ದು, ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ. ತಮಿಳುನಾಡಿನ ವಿಜಯ್ ಫ್ಯಾನ್ಸ್ ನಿರೀಕ್ಷೆ ಹುಸಿ ಆಗಿಸಿದ್ದಾರೆ ಡೈರೆಕ್ಟರ್ ಲೋಕೇಶ್. ಸಾಲು ಸಾಲು ಸಕ್ಸಸ್​ಫುಲ್ ಸಿನಿಮಾಗಳ ಸರದಾರ ಅನಿಸಿಕೊಂಡಿದ್ದ ಲೋಕೇಶ್ ಕನಕರಾಜ್, ದೊಡ್ಡ ಮಟ್ಟದಲ್ಲಿ ಎಡವಿದ್ದಾರೆ. ವಿಜಯ್ ಜೊತೆ ಸಂಜಯ್ ದತ್, ತ್ರಿಶಾ, ಅರ್ಜುನ್ ಸರ್ಜಾ ಅಂತಹ ಘಟಾನುಘಟಿ ಸ್ಟಾರ್ಸ್​ ಇದ್ದರೂ ಸಕ್ಸಸ್ ಕಾಣದೇ ಇರೋದು ದುರಂತ.

ಘೋಸ್ಟ್ ಮತ್ತು ಟೈಗರ್​ಗೆ ಪ್ಲಸ್

ಇನ್ನು ಸೋಲಿಲ್ಲದ ಲಿವಿಂಗ್ ಲೆಜೆಂಡ್ ಆಗಿ ಮಾಸ್ ಪ್ರಿಯರಿಗೆ ಥ್ರಿಲ್ ನೀಡ್ತಾ ಬರ್ತಿದ್ದಂತಹ ನಂದಮೂರಿ ಬಾಲಕೃಷ್ಣ ನಟನೆಯ ಭಗವಂತ್ ಕೇಸರಿ ಕೂಡ ಠುಸ್ ಆಗಿದೆ. ಸ್ಯಾಂಪಲ್ಸ್​ನಲ್ಲಿ ಅಬ್ಬರಿಸಿ, ಬೊಬ್ಬರಿದ ಈ ಸಿನಿಮಾ ರಿಲೀಸ್ ಬಳಿಕ ಯಾಕೋ ಭರವಸೆಯನ್ನ ಚಿಕ್ಕದಾಗಿಸಿದೆ. ನೋಡುಗರಿಗೆ ಸಿನಿಮಾ ಅಷ್ಟಾಗಿ ರುಚಿಸದೇ ಹೋಗ್ತಿದೆ. ಒಟ್ಟಾರೆ ಭಗವಂತ್ ಕೇಸರಿ ಹಾಗೂ ಲಿಯೋ ಡಲ್ ಹೊಡೀತಿರೋದು ಘೋಸ್ಟ್ ಮತ್ತು ಟೈಗರ್​ಗೆ ಪ್ಲಸ್ ಆಗ್ತಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES