Wednesday, January 22, 2025

ಗಿಲ್​ ಸಿಕ್ಸರ್​ಗೆ ಚಿಯರ್ಸ್​ ಹೇಳಿದ ಸಾರಾ ತೆಂಡೂಲ್ಕರ್

ಬೆಂಗಳೂರು : ಟೀಂ​ ಇಂಡಿಯಾದ ಸ್ಟಾರ್ ಬ್ಯಾಟರ್​ ಶುಭಮನ್ ಗಿಲ್​ ಫಾರ್ಮ್ ಕಂಡುಕೊಂಡಿದ್ದಾರೆ. ಡೆಂಘೀ ಜ್ವರದಿಂದ ಬಳಲಿದ ಕಾರಣ ವಿಶ್ವಕಪ್​ನ ಮೊದಲೆರಡು ಪಂದ್ಯಗಳನ್ನು ನಷ್ಟ ಮಾಡಿಕೊಂಡಿದ್ದ ಗಿಲ್​ ಬಳಿಕ ಚೇತರಿಸಿಕೊಂಡು ಪಾಕಿಸ್ತಾನ ವಿರುದ್ಧ ಆಡಿದ್ದರು.

ಆ ಪಂದ್ಯದಲ್ಲಿ ಮಿಂಚಲು ವಿಫಲಗೊಂಡಿದ್ದರು. ಆದರೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 53 ರನ್ ಬಾರಿಸಿ ವಿಶ್ವಾಸ ಮೂಡಿಸಿದ್ದಾರೆ. ಈ ಮೂಲಕ ಅವರು ಹಾಲಿ ವಿಶ್ವಕಪ್​ನಲ್ಲಿ ಮೊದಲ ಅರ್ಧ ಶತಕ ಬಾರಿಸಿದ್ದಾರೆ. ಇದು ಅವರಿಗೆ ಖುಷಿಯ ಸಂಗತಿ ಎನಿಸಿದ್ದರೂ ಅವರಿಗೆ ಖುಷಿ ಕೊಡುವಂಥ ಸಂಗತಿ ಏನೆಂದರೆ ಅವರಿಗೆ ಚಿಯರ್ಸ್​ ಹೇಳಲು ಅವರ ಪ್ರೇಯಸಿ ಎನ್ನಲಾದ ಸಾರಾ ತೆಂಡೂಲ್ಕರ್ ಅವರು ಬಂದಿದ್ದರು. ಈ ಮೂಲಕ ಗಿಲ್​ ದಿನದಾಟದಲ್ಲಿ ನೆಟ್ಟಿಗರ ಹೈಲೈಟ್ ಆಗಿದ್ದರು.

ಪಂದ್ಯದಲ್ಲಿ ಅರ್ಧ ಶತಕ ಬಾರಿಸುವ ಮೊದಲು ಗಿಲ್​ ಸ್ಟ್ರೈಟ್​ ಸಿಕ್ಸರ್​ ಒಂದನ್ನು ಬಾರಿಸಿದ್ದರು. ಈ ವೇಳೆ ಪ್ರೇಕ್ಷಕರ ಸ್ಟ್ಯಾಂಡ್​ನಲ್ಲಿ ಕುಳಿತಿದ್ದ ಸಾರಾ ತೆಂಡೂಲ್ಕರ್​ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಈ ವಿಡಿಯೊವನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಾರಾ ಬಂದಿರುವ ವಿಚಾರವನ್ನು ಜಗತ್ತಿಗೆಲ್ಲ ಮುಟ್ಟಿಸಿದ್ದಾರೆ.

RELATED ARTICLES

Related Articles

TRENDING ARTICLES