Wednesday, January 22, 2025

ಭಕ್ತರ ಪಾಲಿನ ‘ಓಂ ಶಕ್ತಿ ಅಮ್ಮ’ ಇನ್ನಿಲ್ಲ

ಬೆಂಗಳೂರು : ತಮಿಳುನಾಡಿನ ಚೆಂಗಟ್ಟು ಜಿಲ್ಲೆಯಲ್ಲಿರುವ ಓಂ ಶಕ್ತಿ ದೇಗುಲದ ಪೀಠಾಧಿಪತಿ ಬಂಗಾರು ಅಡಿಗಳಾರ್ (82) ಅವರು ಇಂದು ಸಂಜೆ ಇಹಲೋಕ ತ್ಯಜಿಸಿದ್ದಾರೆ.

ಅಡಿಗಳಾರ್ ಅವರನ್ನು ಭಕ್ತರು ಓಂ ಶಕ್ತಿ ಅಮ್ಮ ಎಂದು ಕರೆಯುತ್ತಿದ್ದರು. ಎಲ್ಲಾ ದಿನಗಳಲ್ಲಿಯೂ ದೇವಸ್ಥಾನದಲ್ಲಿ ಮಹಿಳೆಯರಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿ ಅವರು ದೊಡ್ಡ ಕ್ರಾಂತಿ ಮಾಡಿದ್ದರು.

ಅಡಿಗಳಾರ್ ಅವರ ಆಧ್ಯಾತ್ಮಿಕ ಸೇವೆಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬಂಗಾರು ಅಡಿಗಳಾರ್ ಅವರ ಅಗಲಿಕೆಗೆ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಯಡಿಯೂರಪ್ಪ ಸಂತಾಪ

ಬಂಗಾರು ಅಡಿಗಳಾರ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ. ಆಧ್ಯಾತ್ಮಿಕ ಗುರು, ತಮಿಳುನಾಡಿನ ಮೇಲ್ಮರವತ್ತೂರಿನ ಓಂ ಶಕ್ತಿ, ಆದಿಪರಾಶಕ್ತಿ ದೇವಸ್ಥಾನದ ಸಂಸ್ಥಾಪಕ ಶ್ರೀ ಬಂಗಾರು ಅಡಿಗಳಾರ್ ರವರು ಇಹಲೋಕ ತ್ಯಜಿಸಿದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ.

ಅವರ ನಿರ್ಗಮನದಿಂದ ಜಗತ್ತು ಹಿರಿಯ ಅಧ್ಯಾತ್ಮಿಕ ಮಾರ್ಗದರ್ಶಿ ಚೇತನವನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಬೇಡುತ್ತಾ, ಅವರ ಅಸಂಖ್ಯಾತ ಭಕ್ತಾದಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES