Monday, December 23, 2024

ಭಾರತಕ್ಕೆ 257 ರನ್​ಗಳ ಕಠಿಣ ಟಾರ್ಗೆಟ್ ನೀಡಿದ ಬಾಂಗ್ಲಾ

ಬೆಂಗಳೂರು : ವಿಶ್ವಕಪ್ 2023 ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ತಂಡ ಸಾವಲಿನ ಟಾರ್ಗೆಟ್ ಕಲೆಹಾಕಿದೆ.

ಪುಣೆಯ ಮಹರಾಷ್ಟ್ರ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 256 ರನ್​ ಗಳಿಸಿದೆ.

ಬಾಂಗ್ಲಾದೇಶ ಪರ ಲಿಟ್ಟನ್ ದಾಸ್ 66, ತಂಝೀದ್ ಹಸನ್ 51, ಮಹಮ್ಮದುಲ್ಲಾ 46 ಹಾಗೂ ಮುಶ್ಫಿಕರ್ ರಹೀಮ್ 38 ರನ್ ಗಳಿಸಿದರು. ಭಾರತದ ಪರ ಜಡೇಜಾ 2, ಸಿರಾಜ್ 2, ಬುಮ್ರಾ 2 ಹಾಗೂ ಶಾರ್ದೂಲ್ ಠಾಕೂರ್ ಹಾಗೂ ಕುಲದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಬಾಂಗ್ಲಾದೇಶ್ ತಂಡ

ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಲಿಟ್ಟನ್ ದಾಸ್, ತಂಝಿದ್ ಹಸನ್, ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ

RELATED ARTICLES

Related Articles

TRENDING ARTICLES