Monday, December 23, 2024

ಪಾಪ ಬಿಜೆಪಿಯವರು ಡಿಸ್ಪರೇಷನ್​ನಲ್ಲಿದ್ದಾರೆ : ಡಿ.ಕೆ ಶಿವಕುಮಾರ್

ಬೆಂಗಳೂರು : ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿರುವ ವಿಚಾರ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೋಡ್ರಿ ಎಲ್ಲದರಲ್ಲೂ ಅನುಮಾನ, ಯಾರ ಮೇಲೂ ಅನುಮಾನ ಪಡೋದಕ್ಕೆ ಆಗಲ್ಲ. ಪಾಪ ಬಿಜೆಪಿಯವರು ಡಿಸ್ಪರೇಷನ್‌ನಲ್ಲಿದ್ದಾರೆ ಎಂದು ಕುಟುಕಿದ್ದಾರೆ.

ಡಿಸ್ಪರೇಷನ್ ಅಂದ್ರೆ ಅವರಿಗೆ, ಜನತಾದಳದವರಿಗೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ. ಡಾಕ್ಟರ್​ಗಳೇ ಅದರ ಮೆಜರ್ ಮಾಡಬೇಕು. ಜಗದೀಶ್ ಶೆಟ್ಟರ್ ಅವರು, ಅವರ ಶಕ್ತಿ ಏನಿದೆ ಅಂತ ತೋರಿಸಿದ್ದಾರೆ. ನಾನೇನು ಹೆಚ್ಚು ಮಾತನಾಡಲ್ಲ ಎಂದು ಹೇಳಿದ್ದಾರೆ.

ಏನು ಆಫರ್ ಅನ್ನೋದನ್ನೂ ಹೇಳಿದ್ದಾರೆ

ಬಿಜೆಪಿಯಲ್ಲಿ ಆಪರೇಷನ್‌ ಮಾಡಲು ಒಂದು ಟೀಮ್ ಆಕ್ಟೀವ್ ಆಗಿರೋ ವಿಚಾರ ಕುರಿತು ಮಾತನಾಡಿ, ಎಲ್ಲಾ ಎಂಎಲ್‌ಎ ಯಾರನ್ನ ಭೇಟಿ ಮಾಡ್ತಿದ್ದಾರೆ, ಎಲ್ಲರೂ ನನಗೆ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳ್ತಿದ್ದಾರೆ. ಏನ್ ಆಫರ್ ಮಾಡ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ಅಸೆಂಬ್ಲಿ ನಡೆಯಲಿ ಯಾರೆಲ್ಲಾ ಮಾತನಾಡಲಿದ್ದಾರೆ ಎಲ್ಲಾ ಅಲ್ಲಿ ಮಾತಾಡ್ತೀನಿ ಎಂದು ಡಿಕೆಶಿ ಟಕ್ಕರ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES