Monday, December 23, 2024

ರಮೇಶ್ ಜಾರಕಿಹೊಳಿ ಭೇಟಿ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ದಿಢೀರ್ ಭೇಟಿ ಕುತೂಹಲ ಮೂಡಿಸಿದ್ದು ಈ ಬಗ್ಗೆ ಸ್ವತಃ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರು ಹೇಳಿದ್ರು, ಇತ್ತೀಚೆಗೆ ಬಹಳ ಜನರು ಭೇಟಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಆದರೆ, ಇವತ್ತು ಭೇಟಿಯಾಗಿಲ್ಲ. ಇವತ್ತು ಭೇಟಿಯಾಗಿಲ್ಲ, ಎರಡು ತಿಂಗಳಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ. ಬಂದವರಿಗೆ ಬ್ಯಾಡ ಅಂತ ಹೇಳಲು ಆಗಲ್ಲ ಎಂದು ತಿಳಿಸಿದ್ದಾರೆ.

ಬೇರೆ ಕಡೆ ಹೋದಾಗ ಹಳೆ ಸಂಬಂಧ ಇರುವುದರಿಂದ ಭೇಟಿಯಾಗಿರುತ್ತೇನೆ. ರಾಜಕೀಯವಾಗಿ ನಾನು ಚರ್ಚೆ ಮಾಡಿಲ್ಲ. ಅವರು ಸಹ ಆ ಪ್ರಯತ್ನ ಮಾಡಿಲ್ಲ. ಇದು ಸಹಜ ಭೇಟಿ ಅಷ್ಟೇ. ಕಾಂಗ್ರೆಸ್​ಗೆ ಬಂದಾಗ ಬಿಜೆಪಿಗೆ ವಾಪಸ್ ಹೋಗಬಾರದು ಎಂಬ ನಿರ್ಧಾದಿಂದಲೇ ಬಂದಿದ್ದೇನೆ. ನನ್ನನ್ನು ಯಾರು ಕಾಂಗ್ರೆಸ್ ನಿಂದ ಬಿಜೆಪಿ ಬನ್ನಿ ಅಂತ ಯಾರು ಹೇಳಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನ ಆರ್.ಟಿ ನಗರದ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದ್ದಾರೆ. ಇಬ್ಬರು ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

RELATED ARTICLES

Related Articles

TRENDING ARTICLES