ಬೆಂಗಳೂರು : ಹಮಾಸ್ ಉಗ್ರರ ಮೇಲೆ ಯುದ್ಧ ಘೋಷಿಸಿರುವ ಇಸ್ರೇಲ್ ಸೇನೆ ಸಮರಕ್ಕೆ ಸಜ್ಜಾಗಿದೆ. ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿ ಯಾವಾಗ ಬೇಕಾದ್ರೂ ರಾಕೆಟ್ ದಾಳಿ ನಡೆಯಬಹುದು.
ಯುದ್ಧ ಎದುರಿಸಲು ಪಣ ತೊಟ್ಟಿರುವ ಇಸ್ರೇಲ್‌ಗೆ ಸಾಲು, ಸಾಲು ಸಂಕಷ್ಟಗಳು ಎದುರಾಗಿದೆ. ಮನೆಯ ಪ್ರತಿಯೊಬ್ಬರು ಯುದ್ಧಕ್ಕೆ ಸಜ್ಜಾಗಿರುವ ಸಂದರ್ಭದಲ್ಲಿ ಪ್ರಕೃತಿಯ ವಿಕೋಪ ಎದುರಾಗಿದೆ. ಇಸ್ರೇಲ್‌ನ ಟೆಲ್ ಅವೀವ್‌ದಲ್ಲಿ ಧಾರಾಕಾರ ಮಳೆ ಸುರಿದಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದಾಗಿ ಪ್ರವಾಹ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಕಾರುಗಳೆಲ್ಲಾ ಮುಳುಗಡೆಯಾಗಿವೆ. ಹಮಾಸ್ ಉಗ್ರರ ಅಟ್ಟಹಾಸದ ಮಧ್ಯೆ ಪ್ರವಾಹ ಕೂಡ ಇಸ್ರೇಲ್ ನಾಗರಿಕರಿಗೆ ಸವಾಲಾಗಿ ಪರಿಣಮಿಸಿದೆ. ಪ್ರವಾಹದ ಪರಿಸ್ಥಿತಿಯಿಂದಾಗಿ ಇಸ್ರೇಲ್ ಸೈನಿಕರು ಗಾಜಾ ಪಟ್ಟಿಯ ಮೇಲೆ ಮಾಡುವ ದಾಳಿ ವಿಳಂಬವಾಗಿದೆ.