Sunday, January 19, 2025

ಗೆಲುವಿನ ಖಾತೆ ತೆರೆದ ಆಸಿಸ್, ಕೆಟ್ಟ ದಾಖಲೆ ಬರೆದ ಶ್ರೀಲಂಕಾ

ಬೆಂಗಳೂರು : ಆ್ಯಡಂ ಜಂಪಾ ಸ್ಪಿನ್‌ ಮೋಡಿ ಹಾಗೂ ಜೋಶ್‌ ಇಂಗ್ಲಿಸ್‌ ಮಿಚೆಲ್ ಮಾರ್ಷ್ ಬ್ಯಾಟಿಂಗ್‌ ಅಬ್ಬರಕ್ಕೆ ಮಂಕಾದ ಲಂಕಾ, ಆಸೀಸ್‌ ವಿರುದ್ಧ ಹೀನಾಯ ಸೋಲನುಭವಿಸಿದೆ.

ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಆಸ್ಟ್ರೇಲಿಯಾ ಸೋಮವಾರದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಅಂತೆಯೇ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಶ್ರೀಲಂಕಾ ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದೆ.

ಲಖನೌದ ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್‌ಗಳಾದ ಪಥುಮ್‌ ನಿಸಾಂಕ ಮತ್ತು ಕುಶಾಲ ಪೆರೆರಾ ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಕೇವಲ 209 ರನ್‌ಗಳಿಗೆ ಆಲೌಟ್‌ ಆಯಿತು. 210 ರನ್‌ಗಳ ಗುರಿ ಬೆನ್ನತ್ತಿದ ಆಸೀಸ್‌ ತಂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ 35.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 215 ರನ್‌ಗಳನ್ನು ಬಾರಿಸಿ ಗೆಲುವು ದಾಖಲಿಸಿತು.

ಅತಿ ಹೆಚ್ಚು ಜಯಗಳಿಸಿದ ತಂಡ

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಶ್ರೀಲಂಕಾ ಅತಿ ಹೆಚ್ಚು ಪಂದ್ಯಗಳ್ನು (42) ಸೋತ ತಂಡ ಎಂಬ ಕೆಟ್ಟ ದಾಖಲೆ ಬರೆದಿದೆ. ಜಿಂಬಾಬ್ವೆ (42) ಹೆಸರಿನಲ್ಲಿದ್ದ ದಾಖಲೆಯನ್ನು ಶ್ರೀಲಂಕಾ ಸರಿಗಟ್ಟಿತು. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳ ಪೈಕಿ ವೆಸ್ಟ್ ಇಂಡೀಸ್​ 35 ಹಾಗೂ ಇಂಗ್ಲೆಂಡ್ 34 ಪಂದ್ಯಗಳಲ್ಲಿ ಸೋತಿದೆ. ಇನ್ನೂ ಆಸ್ಟ್ರೇಲಿಯಾ ಈವರೆಗೆ ಶ್ರೀಲಂಕಾ ವಿರುದ್ಧ ಆಡಿದ ಎಲ್ಲಾ 9 ವಿಶ್ವಕಪ್ ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ವಿಶ್ವಕಪ್​ನಲ್ಲಿ ಒಂದು ತಂಡದ ವಿರುದ್ಧ ಅತಿ ಹೆಚ್ಚು ಜಯಗಳಿಸಿದ ತಂಡ ಎಂಬ ಶ್ರೇಯಕ್ಕೆ ಆಸಿಸ್​ ಪಾತ್ರವಾಗಿದೆ.

RELATED ARTICLES

Related Articles

TRENDING ARTICLES