Wednesday, January 22, 2025

ಸೆಕ್ಯುರಿಟಿ ಗಾರ್ಡ್​ಗೆ ಚಾಕು ಇರಿದ ದುಷ್ಕರ್ಮಿಗಳು

ಮಂಡ್ಯ : ದರೋಡೆಗೆ ಬಂದಿದ್ದ ದುಷ್ಕರ್ಮಿಗಳು ಸೆಕ್ಯುರಿಟಿ ಗಾರ್ಡ್​​ಗೆ ಚಾಕು ಇರಿದಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದಲ್ಲಿ ನಡೆದಿದೆ.

ಸೆಕ್ಯೂರಿಟಿ ಗಾರ್ಡ್ ಮೋಹನ್ ಎಂಬಾತನಿಗೆ ಚಾಕು ಇರಿಯಲಾಗಿದ್ದು, ಗಾಯಾಳು ಮೋಹನ್ ಕುಮಾರ್​​ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆ.ಆರ್. ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಧ್ಯರಾತ್ರಿ ಬೈಕ್​​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಮೋಹನ್ ಕುಮಾರ್ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​​ನ ಸೆಕ್ಯೂರಿಟಿ ಗಾರ್ಡ್​​ ಆಗಿ ಕೆಲಸ ನಿರ್ವಹಿಸುತ್ತಿದ್ರು. ಆರೋಪಿಗಳು ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನಕ್ಕೆ ಬಂದಿದ್ರು. ಬ್ಯಾಂಕ್ ಬಳಿ ನಿಂತಿದ್ದನ್ನು ಕಂಡು ಪ್ರಶ್ನೆ ಮಾಡುತ್ತಿದ್ದಂತೆ ಚಾಕುವಿನಿಂದ ಚುಚ್ಚಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES