Monday, December 23, 2024

ಅರಸೀಕೆರೆಗೆ ಇನ್ನೂ 100 ಕೋಟಿ ಕೊಡಲಿ, ಹಿಡ್ಕೊಂಡಿರೋರು ಯಾರು? : ಹೆಚ್.ಡಿ ರೇವಣ್ಣ

ಹಾಸನ : ಅರಸೀಕೆರೆಗೆ ಇನ್ನೂ 100 ಕೋಟಿ ಕೊಡಲಿ, ಹಿಡ್ಕೊಂಡಿರೋರು ಯಾರು? ಅರಸೀಕೆರೆ ನಮ್ಮ ಜಿಲ್ಲೆಗೆ ಸೇರಿಲ್ವಾ? ಆ ಜನ ನಮ್ಮವರಲ್ವಾ? 100 ಕೋಟಿ ಇಲ್ಲ ಅಂದ್ರೆ 200 ಕೋಟಿ ಕೊಡಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗುಡುಗಿದರು.

ಅರಸೀಕೆರೆ ಕ್ಷೇತ್ರಕ್ಕೆ ಮಾತ್ರ ಸಚಿವ ಭೇಟಿ ವಿಚಾರವಾಗಿ ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಅದಕ್ಕೆಲ್ಲ ತಲೆಕೆಸಿಕೊಳ್ಳೋದಿಲ್ಲ. ಅರಸೀಕೆರೆ ಅಭಿವೃದ್ಧಿ ಆದ್ರೆ‌ ನಮಗೆ ಒಳ್ಳೆಯದೇ ಅಲ್ವಾ? ಇವರೆಲ್ಲ ಕಾಂಗ್ರೆಸ್​ಗೆ ವೋಟ್ ಕೊಟ್ಟಿಲ್ಲ. ಮೊನ್ನೆ ಯಾರು ಹೇಳಿಲ್ವೇನ್ರಿ.. ನಮಗೆ ಯಾರು ವೋಟ್ ಕೊಟ್ಟಿದ್ದಾರೆ ಅವರಿಗೆ ಗ್ರ್ಯಾಂಟ್ ಕೊಡ್ತೀವಿ ಅಂತ ಎಂದು ಕಿಡಿಕಾರಿದರು.

ನಮ್ಮ ಕ್ಷೇತ್ರಕ್ಕೆ ಕೊಡದೇ ಹೋದ್ರೆ ಏನು ಮಾಡೋಣ ನಾನು. ನಮ್ಮ ಕ್ಷೇತ್ರಕ್ಕೆ ಕೊಟ್ರೆ ಸಂತೋಷ, ಕೊಡದೇ ಹೋದ್ರೆ ಬೇಡ ಅನ್ನೋದು. ನಾವು ದಿನಾ ಲೆಟರ್ ಬರೆಯುತ್ತಿದ್ದೇವೆ. ಎಲ್ಲಿ ವೋಟ್ ಹಾಕಿದ್ದಾರೆ ಅಲ್ಲಿಗೆ ದುಡ್ಡು ಕೊಡೋದು ಅಂತ ನಿರ್ಣಯ ಮಾಡಿದ್ರೆ, ಏನು ಮಾಡೋದು ನಾವು. ಹಾಗಿದ್ರೆ ಎಲ್ಲಿ ವೋಟ್ ಹಾಕಿದ್ದಾರೆ ಅಲ್ಲಿ ಜೋಳ ಖರೀದಿ‌ ಮಾಡೋದಕ್ಕೆ ಹೇಳಿ ಎಂದು ಚಾಟಿ ಬೀಸಿದರು.

ಹಣಕಾಸು ಮಂತ್ರಿಗಳೇ‌ ಹೇಳಬೇಕು

ಐಟಿ ದಾಳಿ ಬಗ್ಗೆ ಮಾತನಾಡಿ, ಒಂದೇ ಮನೆಯಲ್ಲಿ 40 ಕೋಟಿ ದುಡ್ಡು ಇಡ್ಕೋತಾರೆ ಅಂದ್ರೆ ಏನ್ರೀ ಅರ್ಥ ಇದು. ಒಂದ್ಕಡೆ 40, ಇನ್ನೊಂದ್ಕಡೆ 45, 90 ಕೋಟಿಯನ್ನ ಒಂದೇ ಮನೆಯಲ್ಲಿ ಇಟ್ಕೋಳ್ಳೋದಕ್ಕೆ ಭಾರತ ಸರ್ಕಾರದ ಹಣಕಾಸು ಮಂತ್ರಿಗಳೇ‌ ಹೇಳಬೇಕು. ನಾನು ಹೇಳೋದಕ್ಕೆ ಆಗುತ್ತೇ? ನಮಗೆ ಅಷ್ಟು ಅನುಭವ ಇಲ್ಲ. ಒಂದು ಮನೆಯಲ್ಲಿ 40, ಇನ್ನೋದು‌ ಮನೆಯಲ್ಲಿ 45 ಕೋಟಿ ಇಡಬಹುದಾ? ಎಂದು ಪ್ರಶ್ನಿಸಿದರು.

ಕಂಟ್ರ್ಯಾಕ್ಟರ್ ಪರ ಕಾಂಗ್ರೆಸ್​ ಶಾಸಕ ಶಿವಲಿಂಗೇಗೌಡ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿ, ಅದು ಅವರಿಗೆ ಪರಿಚಯ ಇರಬೇಕು, ಗೊತ್ತಿಲ್ಲ ಅದು ನನಗೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES