Sunday, December 22, 2024

ಹುಲಿಯಂತಿದ್ದ ಸಿದ್ದರಾಮಯ್ಯ, ಈಗ ಪಂಜರದ ಗಿಣಿಯಾಗಿದ್ದಾರೆ : ವಾಟಾಳ್ ನಾಗರಾಜ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಹುಲಿ ಆಗಿದ್ರು ಈಗ ಪಂಜರದ ಗಿಣಿಯಾಗಿದ್ದಾರೆ. ಸಿದ್ದರಾಮಯ್ಯ ನೀರು ಬಿಡದ ತಿರ್ಮಾನ ತೆಗೆದುಕೊಳ್ಳಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​​​ ನಾಗರಾಜ್​​ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮಿಳುನಾಡಿಗೆ ಕಾವೇರಿ ನೀರನ್ನು ಬಿಡ್ತಾನೆ ಇದ್ದಾರೆ. ನಮಗೆ ನೀರಿಲ್ಲ, ಕರೆಂಟ್ ಇಲ್ಲ. ತುರ್ತು ಶಾಸನ ಸಭೆ ಕರೆದು ನೀರು ಬಿಡದಿರುವ ತೀರ್ಮಾನ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.

ತಮಿಳುನಾಡಿನವರು ಶಾಸಕಾಂಗ ಸಭೆ ಕರೆದು ನಿರ್ಣಯ ಮಾಡಿದ್ದಾರೆ. ನಮ್ಮವರು ಶಾಸಕಾಂಗ ಸಭೆ ಕರೆದು‌ ತೀರ್ಮಾನ ತೆಗೆದು ಕೊಂಡಿಲ್ಲ. ಪಾರ್ಲಿಮೆಂಟ್ ಸದಸ್ಯರು ಎಲ್ಲಿದ್ದಾರೋ ಗೊತ್ತಿಲ್ಲ. ಕಾವೇರಿಗಾಗಿ ಎಂಪಿಗಳು ಮಾತನಾಡ್ತಿಲ್ಲ. ಕೂಡಲೇ ಅವರು ರಾಜೀನಾಮೆ ಕೊಡಬೇಕು ಎಂದು ಆಕ್ರೋಶ ಹೊರಹಾಕಿದರು.

ತಹಶೀಲ್ದಾರರ ಕಚೇರಿ ಮುಂಭಾಗ ಪ್ರತಿಭಟನೆ

ನಾಳೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕ್ತೇವೆ. ಶಾಸನ ಸಭೆ ಕರೆಯುವಂತೆ ಒತ್ತಾಯ ಮಾಡುತ್ತೇವೆ. ಅಕ್ಟೋಬರ್ 18ಕ್ಕೆ ಅತ್ತಿಬೆಲೆಯಿಂದ ಹೊಸೂರಿನವರೆಗೆ ಪ್ರತಿಭಟನೆ ಮಾಡುತ್ತೇವೆ. ಹೊಸೂರಿನ ತಹಶೀಲ್ದಾರರ ಕಚೇರಿ ಮುಂಭಾಗ ಪ್ರತಿಭಟನೆ ಮಾಡ್ತೇವೆ ಎಂದು ವಾಟಳ್ ನಾಗರಾಜ್ ಹೇಳಿದರು.

RELATED ARTICLES

Related Articles

TRENDING ARTICLES