ನವದೆಹಲಿ : ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕಿಂತ ಇಸ್ರೇಲ್ ಹಾಗೂ ಹಮಾಸ್ ಯುದ್ಧದಲ್ಲಿ ಪ್ರಧಾನಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣಾ ಕಣದಲ್ಲಿರುವ ಮಿಜೋರಾಂನಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮತ್ತು ಭಾರತ ಸರ್ಕಾರ ಇಸ್ರೇಲ್‌ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಆದರೆ, ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಆಸಕ್ತಿ ಇಲ್ಲ ಎಂಬುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದರು.
ಜೂನ್ ತಿಂಗಳಲ್ಲಿ ತಮ್ಮ ಮಣಿಪುರ ಭೇಟಿಯನ್ನು ಪ್ರಸ್ತಾಪಿಸಿದ ಅವರು ಮಣಿಪುರದ ಕಲ್ಪನೆಯನ್ನು ಬಿಜೆಪಿ ನಾಶಪಡಿಸಿದೆ. ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿ ಮಣಿಪುರ ಈಗ 2 ರಾಜ್ಯವಾಗಿದೆ, ಜನರನ್ನು ಹತ್ಯೆ ಮಾಡಲಾಗಿದೆ, ಮಹಿಳೆಯರಿಗೆ ಕಿರುಕುಳ ನೀಡಲಾಗಿದೆ ಮತ್ತು ಮಕ್ಕಳನ್ನು ಕೊಲ್ಲಲಾಗಿದೆ. ಆದರೆ, ಪ್ರಧಾನಿ ಮಾತ್ರ ಅಲ್ಲಿಗೆ ಭೇಟಿ ನೀಡುತ್ತಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ
ಎಲ್ಲರನ್ನು ಗೌರವದಿಂದ ಕಾಣುವ ಮತ್ತು ಪೊಳ್ಳು ಮಾತುಗಳನ್ನಲ್ಲ ಬದಲಾಗಿ ಮಿಜೋರಾಂ ರಾಜ್ಯದ ದೃಷ್ಟಿಯನ್ನು ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ನಾನು ನಿಮ್ಮೊಂದಿಗೆ ಬಿಡಲು ಬಯಸುವ ಒಂದು ವಿಷಯವಿದ್ದರೆ, ನಾವು ರಕ್ಷಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.