Monday, December 23, 2024

ಅಪ್ಪು ಜನಪ್ರಿಯತೆ ರಾಜ್​ಕುಮಾರ್ ಅವರನ್ನೂ ಮೀರಿಸಿದೆ : ಸಿದ್ದರಾಮಯ್ಯ

ಬೆಂಗಳೂರು : ಡಾ.ರಾಜ್ ಕುಮಾರ್ ಅವರ ಜೊತೆ ನನಗೆ ಉತ್ತಮ ಒಡನಾಟವಿದೆ. ಅವರು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಕೆಟ್ಟ ಪದ ಬಳಸಿದ್ದು ಇಲ್ಲ. ಪುನೀತ್ ಅವರ ಜನಪ್ರಿಯತೆ ರಾಜ್ ಕುಮಾರ್ ಅವರನ್ನೂ ಮೀರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಪುನೀತ್ ರಾಜಕುಮಾರ್ ಅವರ ಸಂಗ್ರಹಣೀಯ ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಎಲ್ಲಾ ಊರುಗಳಲ್ಲಿ ಅಪ್ಪು ಅವರ ಫ್ಲೆಕ್ಸ್ ಹಾಕಿ, ಜನ ಶೋಕಗ್ರಸ್ಥರಾಗಿದ್ರು. ಅಂತಹ ವ್ಯಕ್ತಿ ಬಹಳ ಬೇಗ ನಮ್ಮನ್ನ ಅಗಲಿದರು. ಅವರು ಬದುಕಿದ್ದಿದ್ರೆ ನಾವು ನಿರೀಕ್ಷೆ ಮಾಡಲಾಗದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸೋ ಶಕ್ತಿ ಭಗವಂತ ನೀಡಲಿ ಎಂದರು.

ಕರ್ನಾಟಕ ರತ್ನ ಡಾ.ಪುನೀತ್ ರಾಜ್​ಕುಮಾರ್ ಅವರ ಪ್ರತಿಮೆ‌ ಅನಾವರಣ ಮಾಡಿದ್ದೇವೆ. ಈ ಪ್ರತಿಮೆಯನ್ನ N3K ಸ್ಟುಡಿಯೋಸ್, PRK ಸ್ಟುಡಿಯೋಸ್ ಸಹಯೋಗದಲ್ಲಿ ಮಾಡಿದ್ದಾರೆ. ಅವರಿಗೆ ಅಭಿನಂದನೆ‌ ಸಲ್ಲಿಸುತ್ತೇನೆ. ಕರ್ನಾಟಕ‌ ಕಂಡಂತಹ ಅಪರೂಪದ ಹಾಗೂ ಹೆಸರಾಂತ ನಟ ಪುನೀತ್. ಸರಳ, ಸೌಜನ್ಯ ವ್ಯಕ್ತಿತ್ವ, ಸ್ವಲ್ಪವೂ ಅಹಂ‌ ಇರದ ವ್ಯಕ್ತಿ. ಇಡೀ ಕರ್ನಾಟಕದಲ್ಲಿ ಬಹುಶಃ ಇವರಷ್ಟು ಅಭಿಮಾನಿಗಳನ್ನು ಯಾರೂ ಪಡೆದುಕೊಂಡಿರಲಿಲ್ಲ ಎಂದು ಹೇಳಿದರು.

ಮತ್ತೊಬ್ಬ ಅಪ್ಪು ನೋಡೋದು ಕಷ್ಟ

ಅಪ್ಪು ಅವರು ಅಕಾಲಿಕ ಮರಣಕ್ಕೆ ತುತ್ತಾದಾಗ.. ಪ್ರತಿಯೊಂದು ಕುಟುಂಬ ತಮ್ಮ ಮನೆಯಲ್ಲೇ ಸಾವಾಗಿದೆ ಅನ್ನೋ ತರಹ ನೋವು ಅನುಭವಿಸಿದರು. ಪ್ರತೀ‌ ಮನೆಯಲ್ಲಿ ಪುನೀತ್ ಅವರ ಭಾವಚಿತ್ರಗಳಿವೆ. ಬಹುಶಃ ಮತ್ತೊಬ್ಬ ಪುನೀತ್ ಅಂತಹ ವ್ಯಕ್ತಿಯನ್ನ‌ ನೋಡೋದು ಕಷ್ಟ. ರಾಜ್ ಕುಮಾರ್ ಹಾಗೂ ಅವರ ಮಕ್ಕಳು ಮಾನವೀಯತೆ ಇರೋರು. ಮಾನವೀಯತೆ ಇರೋರು ಮತ್ತೊಬ್ಬರನ್ನ‌ ಪ್ರೀತಿಸ್ತಾರೆ, ಗೌರವಿಸ್ತಾರೆ ಎಂದು ತಿಳಿಸಿದರು.

ಮಾ.17ರಂದು ಸ್ಫೂರ್ತಿಯ ದಿನ

ಅಶ್ವಿನಿ ಪುನೀತ್ ರಾಜ್​ ಕುಮಾರ್ ಒಂದು ಮನವಿ ಮಾಡಿದ್ದಾರೆ. ಡಾ. ರಾಜ್ ಕುಮಾರ್ ಸ್ಮಾರಕವನ್ನು ಪುನರಾಭಿವೃದ್ದಿಗೊಳಿಸಲು ಮನವಿ ಮಾಡಿದ್ದಾರೆ. ನಮ್ಮ ಸರ್ಕಾರ ಅದನ್ನ ಮಾಡಲಿದೆ. ಮಾರ್ಚ್ 17ರಂದು ಸ್ಫೂರ್ತಿಯ ದಿನ ಅನೌನ್ಸ್ ಆಗಿತ್ತು. ಕಳೆದ ಸರ್ಕಾರ ಮಾಡಿಲ್ಲ, ನಾವು ಅದನ್ನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

RELATED ARTICLES

Related Articles

TRENDING ARTICLES