Monday, December 23, 2024

ಸಲ್ಲು ‘ಟೈಗರ್ 3’ ಟ್ರೈಲರ್​ಗೆ ಭರ್ಜರಿ ರೆಸ್ಪಾನ್ಸ್

ಬೆಂಗಳೂರು : ಬಹುನಿರೀಕ್ಷಿತ ಟೈಗರ್-3 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಲ್ಮಾನ್ ಖಾನ್ ನಟನೆಯ ಆ್ಯಕ್ಷನ್ ಪ್ಯಾಕ್ಡ್ ಈ ಟ್ರೈಲರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸಿನಿಮಾ ರಿಲೀಸ್ ಆಗೋಕೆ ಇನ್ನೂ ಒಂದು ತಿಂಗಳು ಇದ್ದರೂ, ಸಿನಿಮಾ ನಾನಾ ಕಾರಣಗಳಿಂದಾಗಿ ಕ್ರೇಜ್ ಕ್ರಿಯೇಟ್ ಮಾಡಿದೆ. ದೀಪಾವಳಿಗೆ ಈ ಸಿನಿಮಾ ಭರ್ಜರಿ ಪಟಾಕಿ ಹಚ್ಚೋದಂತೂ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಸಾಲು ಸಾಲು ಸೋಲು ಕಂಡಿರುವ ಭಜರಂಗಿ ಭಾಯ್‌ಜಾನ್‌ಗೆ ಬಾಕ್ಸಾಫೀಸ್‌ನಲ್ಲಿ ಅಬ್ಬರದ ಗೆಲುವೊಂದು ಸಿಗದೇ ಅನೇಕ ವರ್ಷಗಳೇ ಕಳೆದಿದೆ. ಒಂದು ಕಾಲದಲ್ಲಿ ಸಲ್ಲುಭಾಯ್ ಸಿನಿಮಾ ಅಂದ್ರೆ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಆಗುತ್ತಿತ್ತು. ಆದರೆ, ಈಗ ಸೋತಲ್ಲೇ ಗೆಲ್ಲಲು ಸಲ್ಮಾನ್ ಯೋಚಿಸಿದಂತಿದೆ. ಹಿಂದಿನ ಏಕ್ ಥಾ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಸಲ್ಮಾನ್‌ಗೆ ನಿರಾಸೆ ಮಾಡಿರಲಿಲ್ಲ. ಇದೀಗ ಅದಕ್ಕಿಂತಲೂ ಅಡ್ವಾನ್ಸ್ಡ್ ಆಗಿ ಬರುತ್ತಿದೆ ಟೈಗರ್ 3 ಸಿನಿಮಾ.

ಇದೇ ದೀಪಾವಳಿ ಹಬ್ಬಕ್ಕೆ ಟೈಗರ್ 3 ರಿಲೀಸ್ ಆಗ್ತಿದೆ. ಸಲ್ಮಾನ್ ಖಾನ್ ಜೊತೆ ಕತ್ರೀನಾ ಮತ್ತೆ ತೆರೆ ಹಂಚಿಕೊಂಡಿದ್ದಾರೆ. ನಿರ್ಮಾಪಕ ಆದಿತ್ಯಾ ಚೋಪ್ರಾ ಭರ್ಜರಿ ಬಂಡವಾಳ ಹೂಡಿದ್ದಾರೆ.

RELATED ARTICLES

Related Articles

TRENDING ARTICLES