ಬೆಂಗಳೂರು : ಐಟಿ ದಾಳಿಯಲ್ಲಿ ಸಿಕ್ಕಿರುವ ಹಣದ ಮೂಲ ಪತ್ತೆಗೆ ಇಡಿ ಸಂಸ್ಥೆಗೆ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಐಟಿ ದಾಳಿಯಲ್ಲಿ ಹಣ ಸಿಕ್ಕಿರೋದು ಯಾರದ್ದು ಅಂತ ತನಿಖೆ ನಂತರ ಗೊತ್ತಾಗುತ್ತೆ. ಇಡಿಯವರು ತನಿಖೆ ಮಾಡಬೇಕು ಅಂತ ಎಲ್ಲರೂ ಆಗ್ರಹ ಮಾಡ್ತಿದಾರೆ. ನಾನು ಕೂಡಾ ಅದೇ ಆಗ್ರಹ ಮಾಡ್ತೇನೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಚುನಾವಣೆಗೆ ಸಾವಿರ ಕೋಟಿ ರೂ ಹಣ ಸಂಗ್ರಹ ಮಾಡ್ತಿದ್ದಾರೆ ಅಂತ ಖುದ್ದು ಪ್ರಹ್ಲಾದ್ ಜೋಷಿ ಆರೋಪ ಮಾಡಿದ್ದಾರೆ. ಈ ಸರ್ಕಾರ ಹಣ ಸಂಗ್ರಹ ಮಾಡ್ತಿದೆ, ಅಭಿವೃದ್ಧಿ ಕಡೆ ಗಮನ ಕೊಡ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತಿವೆ. ನೀರಾವರಿ ಯೋಜನೆಗಳು, ರಸ್ತೆ ಕಾಮಗಾರಿಗಳು ನಿಂತಿವೆ. ಇದನ್ನು ನಾನು ಖಂಡಿಸ್ತೇನೆ, ಸರ್ಕಾರ ಅಭಿವೃದ್ಧಿ ಕಡೆ ಗಮನ ಕೊಡಲಿ. ಎಲ್ಲ ಕಡೆ ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬರಗಾಲ ಇದೆ. ರೈತರಿಗೆ ವಿದ್ಯುತ್ ಸಮಸ್ಯೆ ಆಗದಂತೆ ಸರ್ಕಾರ ನೋಡಿಕೊಳ್ಳಲಿ ಎಂದು ಯಡಿಯೂರಪ್ಪ ಒತ್ತಾಯಿಸಿದರು.