ಬೆಂಗಳೂರು : ಕಾಂಗ್ರೆಸ್ ಬಂದಿದೆ ಲೂಟಿಗೆ ಇಳಿದಿದೆ. ಮೊದಲ ಹಂತದಲ್ಲಿ ಹೈಕಮಾಂಡ್ ನೀಡಿರುವ 1,000 ಕೋಟಿ ಟಾರ್ಗೆಟ್‌ಗೆ, ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಟಾರ್ಗೆಟ್ ಕೊಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಡಿ.ಕೆ ಶಿವಕುಮಾರ್-ಬೆಂಗಳೂರು ನಗರಾಭಿವೃದ್ಧಿ 250 ಕೋಟಿ ರೂಪಾಯಿ, ಆರ್.ಬಿ. ತಿಮ್ಮಾಪುರ-ಅಬಕಾರಿ ಇಲಾಖೆ 150 ಕೋಟಿ, ಸತೀಶ್ ಜಾರಕಿಹೊಳಿ-ಲೋಕೋಪಯೋಗಿ ಇಲಾಖೆ 115 ಕೋಟಿ, ಪ್ರಿಯಾಂಕ್ ಖರ್ಗೆ-ಗ್ರಾಮೀಣ ಅಭಿವೃದ್ಧಿ ಇಲಾಖೆ 100 ಕೋಟಿ ಟಾರ್ಗೆಟ್ ನೀಡಲಾಗಿದೆ.
ಇನ್ನೂ ದಿನೇಶ್ ಗುಂಡೂರಾವ್-ಆರೋಗ್ಯ ಇಲಾಖೆ 75 ಕೋಟಿ, ಚಲುವರಾಯಸ್ವಾಮಿ-ಕೃಷಿ ಇಲಾಖೆ 125 ಕೋಟಿ, ಹೆಚ್.ಸಿ.ಮಹದೇವಪ್ಪ-ಸಮಾಜ ಕಲ್ಯಾಣ ಇಲಾಖೆ 95 ಕೋಟಿ ಹಾಗೂ ಕೃಷ್ಣಬೈರೇಗೌಡ-ಕಂದಾಯ ಇಲಾಖೆ 90 ಕೋಟಿ ಗುರಿ ನೀಡಲಾಗಿದೆ ಎಂದು ಹೇಳಿದೆ. ಎರಡನೇ ಹಂತದ ಪಟ್ಟಿಯನ್ನು ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರಿಂದಲೇ ಸ್ವತಃ ಬಿಡುಗಡೆ ಆಗಲಿದೆ ಎಂದು ಕುಟುಕಿದೆ.