Sunday, January 19, 2025

Viral Video : ಸರ್ಕಾರಿ ಕಚೇರಿಯಲ್ಲಿ ಕಡತ ಪರಿಶೀಲಿಸಿದ ಕೋತಿ

ಬೆಂಗಳೂರು : ಕೋತಿಯೊಂದು ಸರ್ಕಾರಿ ಕಚೇರಿಯ ಟೇಬಲ್‌ ಮೇಲೆ ಕುಳಿತು ಕಡತಗಳನ್ನು ಬಿಡಿಸಿ ನೋಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

ಮಂಗನಿಂದ ಮಾನವ ಎಂಬ ಗಾದೆ ಮಾತಿದೆ. ಅದನ್ನು ಸಾಬೀತುಪಡಿಸುವಂತಿದೆ ಈ ಘಟನೆ. ಯಾಕೆಂದರೆ ನಾವು ಹೇಗೆ ವರ್ತಿಸುತ್ತೇವೆ ಅದೇ ರೀತಿ ಈ ಮಂಗನ ವರ್ತನೆಯೂ ಇದೆ. ಉತ್ತರ ಪ್ರದೇಶದ ಸಹರಾನ್ಪುರದ ಸರ್ಕಾರಿ ಕಚೇರಿಯೊಂದರಲ್ಲಿ ಈ ಘಟನೆ ನಡೆದಿದೆ.

ಕಚೇರಿ ಒಳಗೆ ಬಂದ ಮಂಗ ಕುತೂಹಲ ಜತೆಗೆ ಅಷ್ಟೇ ತನ್ಮಯತೆಯಿಂದ ಫೈಲ್‌ ಒಳಗಿರುವ ಪೇಪರ್‌ಗಳನ್ನು ಪರಿಶೀಲಿಸುತ್ತದೆ. ಒಂದಾದ ಬಳಿಕ ಇನ್ನೊಂದು ತೆಗೆದು ನಾಜೂಕಾಗಿ ಪುಟ ತಿರುಗಿಸುತ್ತದೆ. ಸುತ್ತಲೂ ಇರುವ ಜನರು ಅಚ್ಚರಿಯಿಂದ ಇದನ್ನೇ ಗಮನಿಸುತ್ತಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ಬಾಳೆಹಣ್ಣನ್ನು ಆ ಕೋತಿಯ ಎದುರು ಇಡುತ್ತಾನೆ. ಆದರೆ, ಕರ್ತವ್ಯವೇ ಮುಖ್ಯ ಎಂದು ಭಾವಿಸಿದ ಆ ಮಂಗ ಅದರತ್ತ ಕಣ್ಣೆತ್ತಿಯೂ ನೋಡದೆ ಕಡತ ಗಮನಿಸುವುದರಲ್ಲಿ ನಿರತವಾಗುತ್ತದೆ. ಹಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES