Wednesday, January 22, 2025

10 ಕೆಜಿ ಅಕ್ಕಿ ಕೊಟ್ಟಿರೋದು ಒಂದು ಜಾತಿಗೆ ಅಲ್ಲ : ಸಿದ್ದರಾಮಯ್ಯ

ಮೈಸೂರು : ನಾವು 10 ಕೆಜಿ ಅಕ್ಕಿ‌ ಕೊಟ್ಟಿರೋದು‌ ಒಂದು ಜಾತಿಗೆ ಅಲ್ಲ. ಐದು ಉಚಿತ ಗ್ಯಾರಂಟಿ ಕೊಟ್ಟಿರೋದು ಎಲ್ಲಾ ಜಾತಿಗಳಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಕನಕ ಭವನದಲ್ಲಿ ಹಮ್ಮಕೊಂಡಿದ್ದ ಕಾಗಿನೆಲೆ ಮಹಾಸಂಸ್ಥಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರ್ಕಾರದ ಯೋಜನೆಗಳು ಒಂದು ಸಮುದಾಯಗಳಿಗೆ ಅಲ್ಲ, ಎಲ್ಲಾ ಸಮೂದಾಯಗಳಿಗೆ. ಅವಕಾಶಗಳಿಂದ‌ ವಂಚಿತರಾಗಿರುವ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ್ತಾ ಇದೀವಿ. ನಾವು ಉಚಿತ ಬಸ್ ಪ್ರಯಾಣ ಮಾಡಿರುವುದರಿಂದ ಮಹಿಳೆಯರು 70 ಕೋಟಿಗೂ ಹೆಚ್ಚು ಪ್ರಯಾಣ ಮಾಡಿದ್ದಾರೆ ಎಂದರು.

ನಮ್ಮ‌ ಉಚಿತ ಗ್ಯಾರಂಟಿ ಯೋಜನೆಗಳಿಂದ 4 ರಿಂದ 5 ಸಾವಿರ ಹಣ ಪ್ರತಿಯೊಬ್ಬನಿಗೆ ಸಿಗ್ತಾ ಇದೆ. ವರ್ಷಕ್ಕೆ 50 ರಿಂದ 60 ಸಾವಿರ ಪ್ರತಿಯೊಬ್ಬನಿಗೆ ಸಿಕ್ತಾ ಇದೆ. ಹಿಂದೆ ಯಾರು ಇಂತಹ ಕೆಲಸ ಮಾಡಿರಲಿಲ್ಲ. ಇದರಿಂದ‌ ಹಳ್ಳಿಗಾಡಿನ ಜನ ಹಾಗೂ ಬಡವರು ನೆಮ್ಮದಿ‌ ಜೀವನ ಮಾಡ್ತಾ ಇದಾರೆ. ನಿಮ್ಮ ಆಶೀರ್ವಾದದಿಂದ ಈ ರೀತಿಯ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ

ಯಾರು ಏನು ಟೀಕೆ ಮಾಡಲಿ‌ ನಾನು ತಲೆ ಕೆಡಿಸಿಕೊಳ್ಳಲ್ಲ. ರಾಜಕೀಯ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆರೋಪವೇ ಬೇರೆ ಇರುತ್ತೆ, ಸತ್ಯವೇ ಬೇರೆ ಇರುತ್ತೆ. ಆ ಆರೋಪಗಳಿಗೆ ನಾನು ಏನು ಮಾಡೋಕೆ ಆಗಲ್ಲ ಎಂದು ಪ್ರತಿಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

RELATED ARTICLES

Related Articles

TRENDING ARTICLES