ಬೆಂಗಳೂರು : ಮೈಸೂರಿನಲ್ಲಿ ನಡೆದ ಮಹಿಷ ದಸರಾದಲ್ಲಿ ಒಕ್ಕಲಿಗರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಪ್ರೊ.ಕೆ.ಎಸ್ ಭಗವಾನ್ ವಿರುದ್ಧ ರಾಜ್ಯ ಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಎಕ್ಸ್ನಲ್ಲಿ (ಟ್ವೀಟ್ ಮಾಡಿರುವ) ಪ್ರತಿಕ್ರಿಯಿಸಿರುವ ಅವರು, ನಿಮ್ಮ ಪ್ರಚಾರದ ತೆವಲಿಗೆ ನನ್ನ ಧಿಕ್ಕಾರ ಎಂದು ಕಿಡಿಕಾರಿದ್ದಾರೆ.
ಸನ್ಮಾನ್ಯ ಭಗವಾನರೆ ಸಾಧ್ಯವಾದರೆ ಬಡತನ ನಿರ್ಮೂಲನೆ ಹೋರಾಡಿ. ಜಾತಿಯತೆ ದೂರಮಾಡಿ ಸಾಮರಸ್ಯಕ್ಕೆ ಹೋರಾಡಿ. ದೇಶ ಮೊದಲು ಜಾತಿ ನಂತರ ಎಂದು ಹೋರಾಡಿ. ಎಲ್ಲಾ ಮಕ್ಕಳಿಗು ಸಮಾನ ವಿಧ್ಯೆ ಸಿಗಲಿ ಎಂದು ಹೋರಾಡಿ. ಬಡವ ಶ್ರೀಮಂತ ರೇಖೆ ಅಳಿಸಿ ಬದುಕುವ ಕಲೆ ಕಲಿಸಲು ಹೋರಾಡಿ. ಯಾವುದು ಇದು ಪ್ರಚಾರ ತೆವಲಿನ ಹೋರಾಟ. ದಿಕ್ಕಾರವಿರಲಿ ನಿಮ್ಮ ಗುಣಕ್ಕೆ! ಎಂದು ನಟ ಜಗ್ಗೇಶ್ ಹರಿಹಾಯ್ದಿದ್ದಾರೆ.
ಡಿ.ಕೆ ಶಿವಕುಮಾರ್ ಅವರೇ ಯಾಕೆ ಮೌನ?
ಸನ್ಮಾನ್ಯ ಭಗವಾನ ರವರೆ ನೀವು ವಿಧ್ಯಾವಂತರ? ನೀವು ಜ್ನಾನಿಗಳ? ನೀವು ಹಿರಿಯರಾ? ನೀವು ಸಮಾಜ ಸುಧಾರಕರ? ಒಕ್ಕಲುತನ ಸಮುದಾಯ ಅಣಕಮಾಡಿ ಯಾಕೆ ಕುವೆಂಪು ಅವರ ಮೇಲೆ ಹಾಕಿ ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ. ಕರ್ನಾಟಕ ಆರಕ್ಷಕ ಇಲಾಖೆ ಯಾಕಿ ಮೌನ? ಡಿ.ಕೆ ಶಿವಕುಮಾರ್ ಅವರೇ ಯಾಕೆ ಮೌನ? ಸಮಾಜ ಸ್ವಾಸ್ಥ ಕೆಡಿಸುವವರ ಮೇಲೆ ಕ್ರಮ ಜರುಗಿಸಿ ಆರಕ್ಷಕ ಮಹನೀಯರೆ ಎಂದು ಹರಿಹಾಯ್ದಿದ್ದಾರೆ.
ಸನ್ಮಾನ್ಯ ಭಗವಾನ ರವರೆ ನೀವು ವಿಧ್ಯಾವಂತರ?ನೀವು ಜ್ನಾನಿಗಳ?ನೀವು ಹಿರಿಯರಾ?
ನೀವು ಸಮಾಜ ಸುಧಾರಕರ?
“ಒಕ್ಕಲುತನ ಸಮುಧಾಯ ಅಣಕಮಾಡಿ ಯಾಕೆ ಕುವೆಂಪು ರವರ ಮೇಲೆ ಹಾಕಿ ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ”
ಕರ್ನಾಟಕ ಆರಕ್ಷಕ ಇಲಾಖೆ ಯಾಕಿ ಮೌನ?#DKS ರವರೆ ಯಾಕೆ ಮೌನ?
ಸಮಾಜ ಸ್ವಾಸ್ಥ ಕೆಡಿಸುವವರ ಮೇಲೆ ಕ್ರಮ ಜರುಗಿಸಿ ಆರಕ್ಷಕ ಮಹನೀಯರೆ..!— ನವರಸನಾಯಕ ಜಗ್ಗೇಶ್ (@Jaggesh2) October 14, 2023