Sunday, December 22, 2024

Viral Video : ಅಬ್ಬಾ.. ! ಸಲೀಸಾಗಿ ಆಟೋ ಮೇಲೆ ಏರಿದ ಹಾವು

ಬೆಂಗಳೂರು : ಹಾವೊಂದು ಆಟೋ ರಿಕ್ಷಾದ ಮೇಲೆ ಸಂಚರಿಸುತ್ತಿರುವ ದೃಶ್ಯ ಮೊಬೈಲ್​​ ಕ್ಯಾಮರದಲ್ಲಿ ಸೆರೆಯಾಗಿದೆ. ಈ ಹಾವು ಆಟೋ ರಿಕ್ಷಾದ ಛಾವಣಿ ಏರಲು ಪ್ರಯತ್ನಿಸುವ ದೃಶ್ಯವನ್ನು ಕಂಡಾಗಲೇ ದಿಗಿಲಾಗುತ್ತದೆ.

ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕ್ಲಿಪ್‌ನಲ್ಲಿ ಆಟೋದ ಹಿಂಬದಿಯಲ್ಲಿ ಹಾವೊಂದು ಸಾಗುತ್ತಿರುವ ದೃಶ್ಯವನ್ನು ಕಾಣಬಹುದು. ಹೆಡೆ ಎತ್ತಿ ಈ ಹಾವು ಅಲ್ಲಿಂದ ಹೋಗಲು ಯತ್ನಿಸುತ್ತದೆ.

ಈ ಹಾವು ಛಾವಣಿಯನ್ನೇರಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತದೆ. ತಮ್ಮ ರಿಕ್ಷಾ ಸ್ಟ್ಯಾಂಡ್‌ನಲ್ಲಿ ಹಾವನ್ನು ಕಂಡ ಚಾಲಕರು ಒಂದು ಕ್ಷಣ ದಿಗಿಲುಗೊಂಡಿದ್ದರು. ಜೊತೆಗೆ ಬಲು ಕುತೂಹಲದಿಂದಲೇ ನಿಂತು ಹಾವನ್ನು ನೋಡುತ್ತಿದ್ದರು. ಕೆಲವರು ತಮ್ಮ ಮೊಬೈಲ್ ಫೋನ್‌ನಲ್ಲಿ ಈ ದೃಶ್ಯ ಸೆರೆ ಹಿಡಿಯುವುದರಲ್ಲಿ ಬ್ಯುಸಿ ಇದ್ದರು. ಈ ವಿಡಿಯೋ ಈಗ ಸಖತ್​​​​ ವೈರಲ್​​ ಆಗಿದೆ.

RELATED ARTICLES

Related Articles

TRENDING ARTICLES