Tuesday, January 7, 2025

ಬೆಚ್ಚಿಬಿದ್ದ ಬೆಂಗಳೂರಿಗರು : ಎಂ ಸ್ಯಾಂಡ್ ಮರಳಿನಲ್ಲಿ ವ್ಯಕ್ತಿಯ ಶವ ಪತ್ತೆ

ಬೆಂಗಳೂರು : ಎಂ ಸ್ಯಾಂಡ್ ಮರಳಿನಲ್ಲಿ ಅಪರಿಚತ ವ್ಯಕ್ತಿಯ ಶವವೊಂದು ಪತ್ತೆಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆನಂದ್ ಎಂಬುವರು ಹೊಸ ಮನೆ ಕಟ್ಟುವುದಕ್ಕೆ ಮಾದವಪಟ್ಟಣದಿಂದ ಎಂ ಸ್ಯಾಂಡ್ ಮರಳನ್ನು ಬುಕ್ ಮಾಡಿದ್ರು. ಎರಡು ದಿನಗಳ ಹಿಂದೆ ಬುಕ್ ಆಗಿದ್ದ ಎಂ ಸ್ಯಾಂಡ್ ಮರಳು ಆನಂದ್ ಮನೆ ಹತ್ತಿರ ಬಂದಿತ್ತು.‌ ಮನೆ ಹತ್ತಿರ ಅನ್ ಲೋಡ್ ಮಾಡಿದ್ದ ಎಂ ಸ್ಯಾಂಡ್ ಮರಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು.

ಇವತ್ತು ಬೀದಿನಾಯಿಗಳು ಮರಳನ್ನು ಕಾಲಿನಲ್ಲಿ ಕೆದರಿದಾಗ ಶವ ಪತ್ತೆಯಾಗಿರುವ ವಿಚಾರ ಸ್ಥಳೀಯರಿಗೆ ಗೊತ್ತಾಗಿತ್ತು. ತಕ್ಷಣ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಸ್ಥಳೀಯರು ವಿಷಯ ಮುಟ್ಟಿಸಿದ್ದಾರೆ.‌ ಸ್ಥಳಕ್ಕೆ ಬಂದ ಪೊಲೀಸರು ಕೊಳತ ಶವವನ್ನು ರಾಮಯ್ಯ ಶವಗಾರಕ್ಕೆ ಶಿಫ್ಟ್ ಮಾಡಿ ಸತ್ತ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES