Friday, November 22, 2024

ನಾನು ಸತ್ತರೂ ಈ ಹೋರಾಟದಿಂದ ಹಿಂದೆ ಸರಿಯಲ್ಲ : ರಾಕೇಶ್ ಶೆಟ್ಟಿ ಶಪಥ

ಉಡುಪಿ : ‘ನಾನು ಈ ಯುದ್ಧ ಇಲ್ಲಿಗೆ ನಿಲ್ಲಿಸಲ್ಲ. ಮಹೇಶ್ ಶೆಟ್ಟಿ ತಿಮರೋಡಿ ಗುರುವನ್ನು ರೀಚ್ ಆಗುತ್ತೇನೆ. ಕಂಕನಾಡಿಗೆ ಈತ ಧರ್ಮಾಧಿಕಾರಿ ಆಗಬೇಕು. ಅವನು ನಮಗೆ ನಾಟೋದಿಲ್ಲ, ನಮ್ಮೊಂದಿಗಿರೋದು ಮಂಜುನಾಥ. ಮಾಟಮಂತ್ರ ಮಾಡುವ ಸ್ವಾಮೀಜಿಗಳು ನಮ್ಮೊಂದಿಗಿಲ್ಲ. ನಾನು ಸತ್ತರೂ ಈ ಹೋರಾಟದಿಂದ ಹಿಂದೆ ಸರಿಯಲ್ಲ’ ಎಂದು ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಶಪಥ ಮಾಡಿದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಾತನಾಡಿದ ಅವರು, ‘ಶ್ರೀ ಕ್ಷೇತ್ರ ಧರ್ಮಸ್ಥಳ ಮೋಕ್ಷದ ಸ್ಥಳ. ಪ್ರೇಮ ವೈಫಲ್ಯ, ಹಣಕಾಸಿನ ಸಮಸ್ಯೆ ಇನ್ನಿತರ ಸಮಸ್ಯೆಯಿಂದ ಬರ್ತಾರೆ.. ಸಾಯ್ತಾರೆ. ಎಲ್ಲದಕ್ಕೂ ಅವರನ್ನ ಹೊಣೆಗಾರಿಕೆ ಮಾಡಲಾಗುತ್ತಾ? ಮಹೇಶ್ ಶೆಟ್ಟಿ ತಿಮರೋಡಿ ಮುಂದೊಮ್ಮೆ ಅಲ್ಲಿ ಬಂದು ಹಾರಿ ಸಾಯ್ತಾನೆ. ಅವನೊಬ್ಬನೇ ಅಲ್ಲ ಅವನೊಂದಿಗೆ ಇನ್ನು ಹಲವರು ಇರ್ತಾರೆ’ ಎಂದು ಹೇಳಿದರು.

‘ಮತ್ತೊಬ್ಬ ಇದ್ದಾನೆ ಮೆಟ್ಟಣ್ಣನವರ್ ಅಂತ. ಆತ ವಿಧಾನಸೌಧಕ್ಕೆ ಟುಸ್ ಬಾಂಬ್ ಇಟ್ಟಿದ್ದ. ಆತ ಡಿವೈಎಸ್ಪಿಗೆ ಯೋಗ್ಯತೆ ಇಲ್ಲದವನು ಅಂತಾ‌ನೆ. ನಾವು ಇದನ್ನು ಸಹಿಸಿಕೊಂಡಿದ್ದೇವೆ. ಈ ಸಮಯ ಸುಮ್ಮನೆ ಕುಳಿತುಕೊಳ್ಳುವ ಸಮಯ ಅಲ್ಲ. ಪವರ್ ಟಿವಿ ಒಂದು ಭಾಗ ಮಾತ್ರ. ಈ ಹೋರಾಟದಲ್ಲಿ ಗಿಳಿಯಾರ್ ಸೇರಿ ಹಲವರಿದ್ದಾರೆ. ದೇವಸ್ಥಾನರು ಜೈನರದ್ದು ಅಂತಾರೆ. ಆದ್ರೆ, ಧರ್ಮಸ್ಥಳಕ್ಕೆ ಹೋಗಿ ನೋಡಲಿ ಅಲ್ಲಿ ಬರೋರು ಯಾರು ಅಂತ. ಎಸ್​ಡಿಎಂ ಕಾಲೇಜಿಗೆ ಹೋಗಿ ನೋಡಲಿ, ಯಾವ ಜಾತಿಯವರು ಇದ್ದಾರೆ ಅಂತ ಗೊತ್ತಾಗುತ್ತದೆ’ ಎಂದು ಗುಡುಗಿದರು.

ಪವರ್ ಟಿವಿ ಇವನಿಗೆ ಹಸ್ತಾಂತರಿಸುತ್ತೇನೆ

‘ತಾಲೂಕು‌ ಮಟ್ಟದಲ್ಲಿ ತಿಮರೋಡಿ ಡಬ್ಬ ಇಟ್ಟಾಗಿದೆ. ಇದೀಗ ಗ್ರಾಮ ಮಟ್ಟದಲ್ಲಿ ಸಂತೆ ಮಾಡಲು ಹೊರಟಿದ್ದಾರೆ. ನಾವು ನೂರು ದಾಖಲೆ ಕೊಟ್ಟಿದ್ದೇವೆ. ಆದರೆ, ಒಂದಕ್ಕೂ ಉತ್ತರವಿಲ್ಲ. ಬರೀ ಸುಳ್ಳು, ಸರಿಯಿಲ್ಲ‌ ಅಂತಾರೆ ಅಷ್ಟೇ. ನನ್ನ ಒಂದು ದಾಖಲೆಯನ್ನಾದರೂ ಸುಳ್ಳು ಅಂತ ನಿರೂಪಿಸಲಿ. ನನ್ನ ಪವರ್ ಟಿವಿ ಚಾನೆಲ್ ಇವನಿಗೆ ಹಸ್ತಾಂತರಿಸುತ್ತೇನೆ’ ಎಂದು ರಾಕೇಶ್ ಶೆಟ್ಟಿ ಸವಾಲೆಸೆದರು.

ಶಾಂತ ಮೂರ್ತಿ ಒಳಗಡೆ ಹೇಗಿದ್ಯೋ?

ಇದೇ ವೇಳೆ ರಾಕೇಶ್ ಶೆಟ್ಟಿ ಅವರು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಭೇಟಿಯನ್ನು ನೆನೆದರು. ಹೆಗ್ಗಡೆಯವರನ್ನು ನೋಡಲು ಹೋಗಿದ್ದೆ, ಅವರು ದೇವಸ್ಥಾನನ ಹೊರಗೆ ಕುಳಿತಿದ್ರು. ಶಾಂತ ಮೂರ್ತಿ ಒಳಗಡೆ ಹೇಗಿದ್ಯೋ? ಅದೇ ರೀತಿ ಜೀವಂತ ಮಂಜುನಾಥನ ಮೂರ್ತಿ ಹೊರಗಡೆ ಕುಳಿತಿದ್ದರು. ದೇವರ ಕಾರ್ಯ  ಮಾಡ್ತಿದ್ದಿರಿ, ಸರಿಯಾದ್ರೆ ನಿಮಗೆ ಜಯವಾಗಲಿ ಅಂತ ಖಾವಂದರು ಹರಸಿದ್ರು ಎಂದು ಹೇಳಿದರು.

RELATED ARTICLES

Related Articles

TRENDING ARTICLES