ಹಾಸನ : ಒಕ್ಕಲಿಗ ಸಮುದಾಯದ ಬಗ್ಗೆ ಪ್ರೊ.ಕೆ. ಎಸ್ ಭಗವಾನ್ ಆಕ್ಷೇಪಾರ್ಹ ಹೇಳಿಕೆ ವಿಚಾರಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆ ನಾನು ಗಮನಿಸಿಲ್ಲ ಎಂದು ಹೇಳಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಸಮಾಜದ ಬಗ್ಗೆ ಯಾರೇ ಅವಹೇಳನ ಮಾಡಿದ್ರೆ. ಆ ಸಮಯಕ್ಕೆ ಏನು ಆಗಲ್ಲ. ಅವರು ಸೌಜನ್ಯವಾಗಿ ಇನ್ನೊಂದು ಸಮಾಜದ ಬಗ್ಗೆ ಟೀಕೆ ಮಾಡೋದು ತಪ್ಪು. ಅವಶ್ಯಕತೆ ಕೂಡ ಇರೋದಿಲ್ಲ. ಹಾಗೆ ಮಾಡಿದ್ರೆ ಅವರಿಗೆ ಗೌರವ ಕಡಿಮೆಯಾಗುತ್ತದೆ ಹೊರತು ಸಮಾಜಕ್ಕೆ ಅಲ್ಲ. ಯಾರಾದರೂ ವ್ಯಕ್ತಿ ತಪ್ಪಿದ್ದರೆ ಅವರ ಬಗ್ಗೆ ಮಾತನಾಡಬೇಕು ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಹಾಲಿ ಸಂಸದರ ಸ್ಪರ್ಧೆ ವಿಚಾರ ಕುರಿತು ಮಾತನಾಡಿ, ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಇರ್ತಾರೆ. ಕಳೆದ ಚುನಾವಣೆಯೇ ಬೇರೆ ಈ ಚುನಾವಣೆಯೇ ಬೇರೆ. ಅವರು ಬಿಜೆಪಿಯಿಂದ ನಿಲ್ತಾರೊ, ಜೆಡಿಎಸ್ ನಿಂದ ನಿಲ್ತಾರೊ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಮೇಡಂ ಇದುವರೆಗೆ ಚರ್ಚೆ ಮಾಡಿಲ್ಲ
ಸಂಸದೆ ಸುಮಲತಾ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರ ಚರ್ಚೆ ಆಗಿಲ್ಲ. ಈಗ ಯಾವುದೇ ಮೈತ್ರಿ ಇಲ್ಲ. ಹಾಗಾಗಿ. ನಮ್ಮ ಅಭ್ಯರ್ಥಿ ಇರ್ತಾರೆ. ಸುಮಲತಾ ಅವರು ಬಿಜೆಪಿಯಿಂದ ಅಥವಾ ಜೆಡಿಎಸ್ನಿಂದ ಅಭ್ಯರ್ಥಿ ಆಗಬೇಕು. ನಮ್ಮ ಜೊತೆ ಮೇಡಂ ಇದುವರೆಗೆ ಚರ್ಚೆ ಮಾಡಿಲ್ಲ. ತೀರ್ಮಾನ ಅವರಿಗೆ ಬಿಟ್ಟಿದ್ದು. ಅಲ್ಲಿನ ಸ್ಥಾನವನ್ನು ಬಿಜೆಪಿಗೆ ಕೊಡ್ತಾರಾ, ಜೆಡಿಎಸ್ಗೆ ಕೊಡ್ತಾರಾ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.