Monday, December 23, 2024

ಮಹೇಶ್ ಶೆಟ್ಟಿ ತಿಮರೋಡಿ ಒಬ್ಬ ಪರಮ ನೀಚ : ರಾಕೇಶ್ ಶೆಟ್ಟಿ ಕಿಡಿ

ಉಡುಪಿ : ‘ನನ್ನ ಭಾಷಣ ಮಹೇಶ್ ತಿಮರೋಡಿ ವಿರುದ್ಧ. ನಾನು ಮಾಡುತ್ತಿರೋ ಭಾಷಣ ಇನ್ನೊಂದು ಕಡೆವರಿಗೆ. ಅಲ್ಲೊಬ್ಬ ಮಹಿಷ, ಇಲ್ಲಿ‌ ಒಬ್ಬ ಮಹೇಶ. ಮಹೇಶ್ ತಿಮರೋಡಿ.. ನನಗೆ ನಿನ್ನಂತ ಅಪ್ಪ ಇದ್ರಿದ್ರೆ ಅಣ್ಣಪ್ಪನಿಗೆ ತಲೆ ಕಡಿದು ಅರ್ಪಿಸುತ್ತೇನೆ’.

ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಂರಕ್ಷಣಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಗುಡುಗಿದರು.

ಶ್ರೀ ಕ್ಷೇತ್ರದ ಅವಹೇಳನವನ್ನು ನಾನು ಸಹಿಸಲ್ಲ. ಮಹೇಶ್ ತಿಮರೋಡಿ ಒಬ್ಬ ಪರಮ ನೀಚ. ಆ ವ್ಯಕ್ತಿಗೆ ಒಂದು ಚೂರು ಮಾನವೀಯತೆ ಇಲ್ಲ. ಹೆಗ್ಗಡೆಯವರಿಗೆ ಭಿಕ್ಷುಕ ಅಂತಾನೆ. ಹೆಗ್ಗಡೆಯವರ ಭೀಕ್ಷೆಯಿಂದ ನಾವೆಲ್ಲ ಇದ್ದೇವೆ. ಅವರ ಭಿಕ್ಷೆಯಿಂದ ಅದೆಷ್ಟೋ ಕುಟುಂಬಗಳು ಬದುಕುತ್ತಿವೆ. ನಾವು ಅಂತವರಿಗೆ ಮಾತಾಡುವಾಗ ಸುಮ್ಮನಿದ್ದೇವೆ. ಹೀಗಾಗಿ, ತಿಮರೋಡಿ ಹೇಳಿದ ಹಾಗೇ ಮುಟ್ಟಾಳರು, ಅಧರ್ಮಿಯರು ಅಲ್ವಾ?ಎಂದು ಕಿಡಿಕಾರಿದರು.

ಸೌಜನ್ಯ ಸತ್ತಿದ್ದು ತಾಯಿಯನ್ನು ಸೆಲೆಬ್ರೆಟಿ ಮಾಡಲು ಅಲ್ಲ. ಸೌಜನ್ಯ ಸತ್ತ 24 ಗಂಟೆಯೊಳಗೆ ಸಂತೋಷ್ ರಾವ್ ಸಿಕ್ಕಿದ್ದ. ಅಣ್ಣಪ್ಪನೇ ಸಂತೋಷ್ ರಾವ್ನನ್ನು ತೋರಿಸಿದ್ದು. ಆಕೆಯ‌ ತಾಯಿಯೇ ಅವನಲ್ಲ ಅಂತಾರೆ. ಯಾರಾದ್ರೂ ನೋಡಿದ್ದಾರಾ ಅವನಲ್ಲ ಅಂತ?ತಿಮರೋಡಿಯನ್ನು ಒಬ್ಬ ಬಂದು ನಾಯಿಗೆ ಹೋಲಿಸಿದ. ಆದ್ರೆ, ನಾಯಿಯನ್ನು ನಾರಾಯಣನಿಗೆ ಹೋಲಿಸಲಾಗುತ್ತದೆ. ಆತ ನಾಯಿಗಿಂತಲೂ ಕಡೆ ಎಂದು ಆಕ್ರೋಶ ಹೊರಹಾಕಿದರು.

ಸೌಜನ್ಯ ಸತ್ತಾಗ ಮನೆ ಹೇಗಿತ್ತು?

ನನ್ನ ಮನೆ ಬಗ್ಗೆ ಟ್ರೋಲ್ ಮಾಡ್ತಿದ್ದಾರೆ. ಅದರ ಜೊತೆ ಕುಸುಮಾವತಿ ಮನೆ ಮೂರು ಪ್ಲೋರಿನದ್ದು, ನನ್ನ ಮನೆಯ ಲೆಕ್ಕ ಕೊಡುತ್ತೇನೆ. ಆದ್ರೆ, ಅವರು ಲೆಕ್ಕ ಕೊಡಬೇಕಲ್ವಾ? ಸೌಜನ್ಯ ಸತ್ತಾಗ ಮನೆ ಹೇಗಿತ್ತು? ಈಗ 11 ವರ್ಷ ಆದಾಗ ಹೇಗಿದೆ ಅನ್ನೊದನ್ನ ಅವರು ಹೇಳಲಿ. ಇಂದಿನಿಂದ ದಸರಾ ಶುರುವಾಗಿದೆ. ಇನ್ನೊಬ್ಬ ಇದ್ದಾನೆ.. ಹಲ್ಕಟ್ ತಮ್ಮಣ್ಣ. ಅವನು ಮಾತಾಡೋದು ಪಂಜುರ್ಲಿ, ಅಣ್ಣಪ್ಪ ಹೀಗೆ ತುಳುನಾಡು ಪರಶುರಾಮನ ಸೃಷ್ಟಿಯಲ್ಲ ಅಂತ. ಅದನ್ನ ಕೇಳಿಕೊಂಡು ನಾವು ಸುಮ್ಮನೆ ಇದ್ದೀವಿ ಎಂದು ರಾಕೇಶ್ ಶೆಟ್ಟಿ ಅವರು ವಾಸ್ತವಾಂಶ ಬಿಚ್ಚಿಟ್ಟರು.

RELATED ARTICLES

Related Articles

TRENDING ARTICLES