ಚಾಮರಾಜನಗರ : ಕಳೆದ ಮಂಗಳವಾರ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿತ್ತು.
ಈ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ, ಅಮಾನ್ಯಗೊಂಡ 500, 1,000 ನೋಟುಗಳು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಹಳೆಯ 500 ಮತ್ತು 1,000 ನೋಟು ಅಮಾನ್ಯವಾಗಿ 7 ವರ್ಷಗಳು ಕಳೆದರೂ ಮಾದಪ್ಪನ ಹುಂಡಿಯಲ್ಲಿ ಲಕ್ಷಾಂತರ ರೂ. ಹಣ ಪತ್ತೆಯಾಗಿದೆ.
1,000 ಮುಖಬೆಲೆಯ 677 ನೋಟುಗಳು ಪತ್ತೆಯಾಗಿದ್ದು, 500 ಮುಖಬೆಲೆಯ 4,353 ನೋಟುಗಳು ಪತ್ತೆಯಾಗಿವೆ. 2,000 ಮುಖಬೆಲೆಯ 3 ಲಕ್ಷ 56 ಸಾವಿರದಷ್ಟು ಹಣ ಪತ್ತೆಯಾಗಿದೆ. ಒಟ್ಟು 28 ಲಕ್ಷದ 53 ಸಾವಿರ ರೂಪಾಯಿಯಷ್ಟು ಅಮಾನ್ಯವಾದ ನೋಟಿನ ಹಣ ಪತ್ತೆಯಾಗಿದೆ. 28 ಲಕ್ಷದಷ್ಟು ಹಣ ಮಾದಪ್ಪನ ಹುಂಡಿ ಸೇರಿದ್ದರೂ ಸದ್ಯಕ್ಕೆ ಪ್ರಾಧಿಕಾರದ ಪ್ರಯೋಜನಕ್ಕೆ ಬಾರದಂತಾಗಿದೆ.