Wednesday, January 22, 2025

ಇಂಗ್ಲೆಂಡ್​ಗೆ 285 ರನ್ ಟಾರ್ಗೆಟ್ ನೀಡಿದ ಅಫ್ಘಾನಿಸ್ತಾನ

ಬೆಂಗಳೂರು : ವಿಶ್ವಕಪ್-2023ರ ಟೂರ್ನಿಯ 13ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಸವಾಲಿನ ಟಾರ್ಗೆಟ್ ನೀಡಿದೆ.

ನವದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನ್ ಬ್ಯಾಟರ್​ಗಳು ಆಂಗ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಿದರು.

ಅಫ್ಘಾನಿಸ್ತಾನ 49.5 ಓವರ್​ಗಳಲ್ಲಿ 284 ರನ್​ಗಳಿಗೆ ಆಲ್​ಔಟ್​ ಆಯಿತು. ಇಂಗ್ಲೆಂಡ್​ ಬೌಲರ್​ಗಳನ್ನು ದಂಡಿಸಿದ ಗುರ್ಬಾಜ್ ಹಾಗೂ ಇಕ್ರಮ್ ಅರ್ಧಶತಕ ಸಿಡಿಸಿದರು. ಗುರ್ಬಾಜ್ 80, ಇಕ್ರಮ್ 58, ಇಬ್ರಾಹಿಂ 28, ಮುಜೀಬ್ 28, ರಹ್ಮಾನ್ 24 ಹಾಗೂ ರಶೀದ್ ಖಾನ್ 23 ರನ್​ ಗಳಿಸಿದರು. ಇಂಗ್ಲೆಂಡ್ ಪರ ಆದಿಲ್ ರಶೀದ್ 3 ವಿಕೆಟ್ ಪಡೆದರೆ ವುಡ್ 2, ಲಿವಿಂಗ್​ಸ್ಟೋನ್, ಟೋಪ್ಲಿ ಹಾಗೂ ರೂಟ್ ತಲಾ ಒಂದು ವಿಕೆಟ್​ ಪಡೆದರು.

RELATED ARTICLES

Related Articles

TRENDING ARTICLES