Sunday, January 5, 2025

ನಾಗನಾಥೇಶ್ವರ ದೇಗುಲದಲ್ಲಿ ಗೋಡೆ ಕುಸಿತದಿಂದ ಪುರಾಣ ಪ್ರಸಿದ್ಧ ರಥ ಶಿಥಿಲ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರಿನ ಪುರಾಣ ಪ್ರಸಿದ್ಧ ನಾಗನಾಥೇಶ್ವರ ದೇವಾಲಯದಲ್ಲಿ ಗೋಡೆ ಕುಸಿತ ಸಂಭವಿಸಿ ರಥ ಹಾನಿಗೊಳಗಾಗಿರುವಂತಹ ಘಟನೆ ನಡೆದಿದೆ.

ಸುಮಾರು 150 ವರ್ಷಗಳ ಪುರಾತನವಾದ ಅಂತಹ ರಥ ಇದಾಗಿದ್ದು ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿದೆ. 1956ರಲ್ಲಿ ನಿರ್ಮಿಸಿದ ಈ ರಥದ ಮಂಟಪ ರಥವನ್ನು ನಿಲ್ಲಿಸಲು ನಿರ್ಮಾಣ ಮಾಡಲಾಗಿತ್ತು ಆದರೆ ರಾತ್ರಿ ಸುರಿದ ಮಳೆಯಿಂದ ಶಿಥಿಲಗೊಂಡಿದ್ದ ಗೋಡೆಗಳು, ಕುಸಿತ ಸಂಭವಿಸಿ ರಥದ ಒಂದು ಭಾಗಕ್ಕೆ ಸಂಪೂರ್ಣವಾದ ಹಾನಿಯಾಗಿದೆ.

ರಥದ ಮೆರವಣಿಗೆ ಪ್ರತಿ ವರ್ಷವೂ ಸಹ ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಈ ಗೋಡೆಗೆ ಕುಸಿತದಿಂದಾಗಿ ರಥ ಹಾಳಾಗಿದ್ದು ಹಲ್ಲಿನ ಗ್ರಾಮಸ್ಥರು ಬೇಸರವನ್ನು ಹೊರಹಾಕಿದ್ದಾರೆ. ಇನ್ನು ರಥವನ್ನು ಕ್ರೇನ್ ಮೂಲಕ ಹೊರ ತೆಗೆದು ದೇವಾಲಯದ ಆಡಳಿತ ಮಂಡಳಿ ಸರಿಪಡಿಸುವ ಕೆಲಸದಲ್ಲಿ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES