Tuesday, January 14, 2025

ಇನ್ಮುಂದೆ ನೀವು ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ಯಬಹುದು

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ಒಂದಲ್ಲಾ ಒಂದು ಖುಷಿ ಸುದ್ದಿಯನ್ನು ನೀಡುತ್ತಿದೆ. ಈಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

ತನ್ನ ಪ್ರಯಾಣಿಕರಿಗೆ ಪ್ರಯಾಣವನ್ನು ಸುಲಭಗೊಳಿಸಲು ಮೆಟ್ರೋ ಹೊಸ ಮಾರ್ಗಕ್ಕೆ ಮುಂದಾಗಿದೆ. ಇನ್ಮುಂದೆ ನೀವು ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ಯಬಹುದು. ಈ ಹಿಂದೆ BMRCL, ಮೆಟ್ರೋ ಒಳಗೆ ಕೊಂಡೊಯ್ಯಬಹುದಾಗಿರುವ ಬೈಸಿಕಲ್​​ನ ತೂಕ 15 ಕೆ.ಜಿಗಿಂತಲೂ ಹೆಚ್ಚು ಇರುವಂತಿಲ್ಲ. 60 CM x 45 CM x 25 CM ಅಳತೆಯನ್ನು ಮೀರುವಂತಿಲ್ಲ ಎಂದಿತ್ತು.

ಈಗ ಯುವಕರ ಗುಂಪೊಂದು ಮಡಚುವ ಸೈಕಲ್​ನೊಂದಿಗೆ ಮೆಟ್ರೋ ಪ್ರಯಾಣ ಬೆಳೆಸಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಪ್ರಾರಂಭಿಸಲಾದ ಪರ್ಪಲ್ ಲೈನ್ ಮೆಟ್ರೋದೊಳಗೆ ಮಡಚುವ ಸೈಕಲ್​​ನೊಂದಿಗೆ ಪ್ರಯಾಣ ಮಾಡಿದ ಫೋಟೋಗಳನ್ನು ವಿಕ್ರಮ್ ಲಿಮ್ಸೇ ಎಂಬ ಉದ್ಯಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES