Thursday, December 19, 2024

ದಸರಾ ನೆಪ : ಸುಲಿಗೆಗೆ ಇಳಿದ ಖಾಸಗಿ ಬಸ್​ಗಳು

ಬೆಂಗಳೂರು : ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭವಾಗಿದೆ. ಅಕ್ಟೋಬರ್ 21ರಿಂದ 24ರ ವರೆಗೆ ಸಾಲು ಸಾಲು ರಜೆಗಳು ಸಿಗಲಿವೆ. ಈ ಹಿನ್ನೆಲೆ ದಸರಾ ನೆಪದಲ್ಲಿ ಖಾಸಗಿ ಬಸ್​ಗಳು ಸುಲಿಗೆಗೆ ಇಳಿದಿವೆ.

ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗೆ ಹೋಗುವ ಬಸ್​ಗಳ ದರ ದುಪ್ಪಟ್ಟಾಗಿದೆ. ಎಸಿ, ವೋಲ್ವೋ, ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಅಕ್ಟೋಬರ್ 21ರಿಂದ ರಜೆಗಳು ಆರಂಭವಾಗುವ ಹಿನ್ನೆಲೆ ಜನರು ಅಕ್ಟೋಬರ್ 20ರಂದು ಊರಿಗೆ ತೆರಳಲು ಈಗಾಗಲೇ ಟಿಕೆಟ್ ಬುಕ್ ಮಾಡ್ತಿದ್ದಾರೆ. ಆದರೆ, ಅ.20ಕ್ಕೆ ಬುಕ್ಕಿಂಗ್ ಮಾಡಲು ಮುಂದಾದ ಜನರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ಕೊಟ್ಟಿದ್ದಾರೆ. ಬುಕ್ಕಿಂಗ್ ವೆಬ್ ಸೈಟ್​ನಲ್ಲಿ ಟಿಕೆಟ್ ದರ ಒನ್ ಟು ಡಬಲ್ ಆಗಿದೆ.

ಬೆಂಗಳೂರು ಟು ಶಿವಮೊಗ್ಗ

ಅಕ್ಟೋಬರ್ 16 ದರ : 450 ರೂ.ನಿಂದ 650 ರೂ.

ಅಕ್ಟೋಬರ್ 20 ದರ : 1,150 ರೂ.ನಿಂದ 1,400 ರೂ.

ಬೆಂಗಳೂರು ಟು ಹುಬ್ಬಳಿ

ಅಕ್ಟೋಬರ್ 16 ದರ : 600 ರೂ.ನಿಂದ 850 ರೂ.

ಅಕ್ಟೋಬರ್ 20 ದರ : 1,600 ರೂ.ನಿಂದ 2,000 ರೂ.

ಬೆಂಗಳೂರು ಟು ಮಂಗಳೂರು

ಅಕ್ಟೋಬರ್ 16 ದರ : 650 ರೂ.ನಿಂದ 900 ರೂ.

ಅಕ್ಟೋಬರ್ 20 ದರ : 1,600 ರೂ.ನಿಂದ 2,000 ರೂ.

ಬೆಂಗಳೂರು ಟು ಉಡುಪಿ

ಅಕ್ಟೋಬರ್ 16 ದರ : 700 ರೂ.ನಿಂದ 850 ರೂ.

ಅಕ್ಟೋಬರ್ 20 ದರ : 1,600 ರೂ.ನಿಂದ 1,900 ರೂ.

ಬೆಂಗಳೂರು ಟು ಧಾರವಾಡ

ಅಕ್ಟೋಬರ್ 16 ದರ : 650 ರೂ.ನಿಂದ 850 ರೂ.

ಅಕ್ಟೋಬರ್ 20 ದರ : 1,500 ರೂ.ನಿಂದ 2,100 ರೂ.

ಬೆಂಗಳೂರು ಟು ಬೆಳಗಾವಿ

ಅಕ್ಟೋಬರ್ 16 ದರ : 700 ರೂ.ನಿಂದ 900 ರೂ.

ಅಕ್ಟೋಬರ್ 20 ದರ : 1,500 ರೂ.ನಿಂದ 2,100 ರೂ.

ಬೆಂಗಳೂರು ಟು ದಾವಣಗೆರೆ

ಅಕ್ಟೋಬರ್ 16 ದರ : 450 ರೂ.ನಿಂದ 650 ರೂ.

ಅಕ್ಟೋಬರ್ 20 ದರ : 1,300 ರೂ.ನಿಂದ 1,650 ರೂ.

ಬೆಂಗಳೂರು ಟು ಚಿಕ್ಕಮಗಳೂರು

ಅಕ್ಟೋಬರ್ 16 ದರ : 600 ರೂ.ನಿಂದ 650 ರೂ.

ಅಕ್ಟೋಬರ್ 20 ದರ : 1,250 ರೂ.ನಿಂದ 1,500 ರೂ.

ಬೆಂಗಳೂರು ಟು ಹಾಸನ

ಅಕ್ಟೋಬರ್ 16 ದರ : 650 ರೂ.ನಿಂದ 850 ರೂ.

ಅಕ್ಟೋಬರ್ 20 ದರ : 1,600 ರೂ.ನಿಂದ 1,850 ರೂ.

 

ಬೆಂಗಳೂರಿನಿಂದ ಹೊರರಾಜ್ಯಕ್ಕೆ

ಬೆಂಗಳೂರು ಟು ಚೆನೈ

ಅಕ್ಟೋಬರ್ 16 ದರ : 620 ರೂ.ನಿಂದ 850 ರೂ.

ಅಕ್ಟೋಬರ್ 20 ದರ  : 1,800 ರೂ.ನಿಂದ 2,100 ರೂ.

ಬೆಂಗಳೂರು ಟು ಹೈದರಾಬಾದ್

ಅಕ್ಟೋಬರ್ 16 ದರ  : 1,300 ರೂ.ನಿಂದ 1,900 ರೂ.

ಅಕ್ಟೋಬರ್ 20 ದರ : 2,800 ರೂ.ನಿಂದ 3,300 ರೂ.

ಬೆಂಗಳೂರು ಟು ಕೊಯಮತ್ತೂರು

ಅಕ್ಟೋಬರ್ 16 ದರ : 700 ರೂ.ನಿಂದ 1,100 ರೂ.

ಅಕ್ಟೋಬರ್ 20 ದರ : 2,300 ರೂ.ನಿಂದ 2,800 ರೂ.

ಬೆಂಗಳೂರು ಟು ಮುಂಬೈ

ಅಕ್ಟೋಬರ್ 16 ದರ : 1,300 ರೂ.ನಿಂದ 1,600 ರೂ.

ಅಕ್ಟೋಬರ್ 20 ದರ : 2,300 ರೂ.ನಿಂದ 2,700 ರೂ.

ಬೆಂಗಳೂರು ಟು ಗೋವಾ

ಅಕ್ಟೋಬರ್ 16 ದರ : 1,000 ರೂ.ನಿಂದ 1,300 ರೂ.

ಅಕ್ಟೋಬರ್ 20 ದರ : 2,800 ರೂ.ನಿಂದ 3,100 ರೂ.

RELATED ARTICLES

Related Articles

TRENDING ARTICLES