Wednesday, October 30, 2024

ಮಕ್ಕಳ ಕೈಗೆ ಮೊಬೈಲ್ ಕೊಡೋ ಮುನ್ನ ಎಚ್ಚರ: ಮಯೋಫಿಯಾದಿಂದ ಕುರುಡು ಗ್ಯಾರೆಂಟಿ!

ಅತಿಯಾದ ಮೊಬೈಲ್​ ಬಳಕೆಯಿಂದ ಸಣ್ಣ ವಯಸ್ಸಿನಲ್ಲೇ ಮಕ್ಕಳು ಮಯೋಫಿಯಾ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ನೇತ್ರ ತಜ್ಞೆ ಡಾ.ಸುಮಿತ್ರಾ ಮುತ್ತು ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಕ್ಕಳು ಮನೆಯಿಂದ ಹೊರಗಡೆ ಹೋಗಿ ಆಟ ಆಡುವುದನ್ನೆ ಕಡಿಮೆ ಮಾಡಿದ್ದು ಮೊಬೈಲ್​ ಗೇಮ್​ ಗೀಳಿಗೆ ಒಳಗಾಗಿದ್ದಾರೆ. ಅತಿಯಾಗಿ ಮೊಬೈಲ್​ ಫೋನ್​ ವೀಕ್ಷಣೆಯಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಕಣ್ಣಿನ ದೃಷ್ಟಿಯನ್ನೆ ಕಳೆದೊಳ್ಳುವ ಸಮಸ್ಯೆಗಳು ಎದುರಾಗುತ್ತಿದೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ!

ಅತಿಯಾದ ಮೊಬೈಲ್​ ಬಳಕೆ ಮಾಡುತ್ತಿರುವ ಮಕ್ಕಳಲ್ಲಿ ಮಯೋಫಿಯಾ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಇದರಿಂದ ದೂರದಲ್ಲಿರುವುದು ಕಾಣುವುದಿಲ್ಲ ಓದೋಕೆ ಮತ್ತು ಬರೆಯೋಕು ಆಗುವುದಿಲ್ಲ, ಕಣ್ಣುಗಳಲ್ಲಿ ಸೆಳೆತ ಹೆಚ್ಚಾಗುತ್ತದೆ, ಆರಂಭದಲ್ಲಿ ಚಿಕ್ಕದಾಗಿರುವ ಬಗೆಹರಿಸಲಾಗದಷ್ಟು ದೊಡ್ಡದಾಗುತ್ತವೆ ಕೊನೆಗೆ ದೃಷ್ಟಿಯನ್ನೆ ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಕ್ಕಳ ಕೈಗೆ ಮೊಬೈಲ್ ನೀಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಅದಷ್ಟೂ ಮಕ್ಕಳಿಂದ ಮೊಬೈಲ್ ದೂರ ಇಡದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES