Wednesday, January 22, 2025

ಮೋದಿ, ಶಾನ ಮೀಟ್ ಮಾಡ್ತಾರೆ, ಡೈರಿ-ಪೆನ್​ಡ್ರೈವ್ ಕೊಡಿ ಅವ್ರಿಗೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಐಟಿ ದಾಳಿ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿರುವ ಬಗ್ಗೆ ಸಚಿವ ಪ್ರಿಯಾಂಕ್​ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಬಿಜೆಪಿ ಜೊತೆ ವಿಲೀನ ಆಗಿಬಿಟ್ಟಿದ್ದಾರೆ. ಡೈರೆಕ್ಟ್ ಆಗಿ ಪ್ರಧಾನಿ ಮೋದಿ ಹಾಗೂ ಅಮಿತ್​ ಶಾನ ಮೀಟ್ ಮಾಡ್ತಾರೆ. ಡೈರಿ, ಪೆನ್ ಡ್ರೈವ್ ಎಲ್ಲಾ ಕೊಡಿ ಅವರಿಗೆ ಎಂದು ಕುಟುಕಿದ್ದಾರೆ.

ವಿಪಕ್ಷದಲ್ಲಿರೋರನ್ನ ಟಾರ್ಗೆಟ್ ಮಾಡೋ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕಲೆಕ್ಷನ್ ಮಾಡಿದ್ದಾರೆ ಅನ್ನೋದು ಹಾಸ್ಯಾಸ್ಪದ ಹೇಳಿಕೆ. ಸೆಲೆಕ್ಟಿವ್ ರೇಡ್ ಯಾಕೆ ಆಗ್ತಿದೆ? ಐಟಿ, ಇಡಿ ಎಲ್ಲಾ ಬಿಜೆಪಿಯವರ ಕೈಯಲ್ಲೇ ಇದೆ, ತನಿಖೆ ಮಾಡಲಿ. ಚೈತ್ರಾ ಕುಂದಾಪುರ ಕೇಸ್ ನಲ್ಲಿ ಐಟಿ ರೇಡ್ ಯಾಕ್ ಆಗಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಅದಾನಿ ಮೇಲೆ ಯಾಕೆ ರೇಡ್ ಅಗ್ತಿಲ್ಲ

ಹಣ ವರ್ಗಾವಣೆ ನಡೆದಿತ್ತಲ್ಲಾ ರೇಡ್ ಯಾಕ್ ಆಗ್ಲಿಲ್ಲ? ರಾಜಕೀಯ ಪ್ರೇರಿತ ರೇಡ್ ಮಾಡ್ತಿದ್ದಾರೆ. ತನಿಖೆ ಆಗಲಿ, ಉಪ್ಪು ತಿಂದೋರು ನೀರು ಕುಡಿಯಲೇಬೇಕು. ಮ್ಯಾನ್ ಡೇಟ್ ಇಲ್ಲಾಂದ್ರೆ ರೇಡ್ ಮಾಡೋದು. ಗುಜರಾತ್ ಸೇರಿ ಎಲ್ಲಾ ಕಡೆ ವಿಪಕ್ಷಗಳ ಮೇಲೆ ರೇಡ್ ಮಾಡ್ತಿದ್ದಾರೆ. ಎಷ್ಟು ಜನ ಬಿಜೆಪಿಯವರ ಮೇಲೆ ರೇಡ್ ಆಗಿದೆ.. ಲೆಕ್ಕ ತಗೊಳ್ಳಿ. ಯಾಕೆ ಅದಾನಿ ಮೇಲೆ ರೇಡ್ ಅಗ್ತಿಲ್ಲ. ಬಿಜೆಪಿಯರಿಗೆ ಮೇಲೆ ಬಾಸ್ ಗಳಿದ್ದಾರಲ್ಲಾ‌‌.. ಹೋಗಿ ಸಾಕ್ಷಿ ಕೊಡಲಿ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES