ಬೆಂಗಳೂರು : ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿರುವ ಬಗ್ಗೆ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮ್ಮಲ್ಲಿ ಪ್ರತಿಭೆಗಳಿಲ್ಲ.. ದೊಡ್ಡ ಇನ್ನಿಂಗ್ಸ್ ಆಡುವಂಥ ಪ್ರತಿಭೆಗಳು ನಮ್ಮಲ್ಲಿಲ್ಲ. ಉತ್ತಮ ಬ್ಯಾಟಿಂಗ್ ವಿಕೆಟ್‌ನಲ್ಲಿ ಅವಕಾಶ ವ್ಯರ್ಥ. ನಿರಾಶೆಯಾಗಿದೆ. ತುಂಬಾ ನಿರಾಶೆಯಾಯಿತು..’ ಎಂದು ಹೇಳಿದ್ದಾರೆ.
ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ ಪಿಚ್‌ನಲ್ಲಿ ಪಾಕಿಸ್ತಾನ ಬ್ಯಾಟಿಂಗ್ ವಿಭಾಗ ಕುಸಿದಿದೆ. ಭಾರತದ ಬೌಲಿಂಗ್ ಶಿಸ್ತುಬದ್ದ ದಾಳಿ ನಡೆಸಿತು. ನಾಯಕ ರೋಹಿತ್ ಶರ್ಮಾ ಪ್ರಮುಖ ಸಮಯದಲ್ಲಿ ತಮ್ಮ ಬೌಲರ್‌ಗಳಿಗೆ ಅವಕಾಶ ನೀಡುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಪಾಕಿಸ್ತಾನಕ್ಕೆ ಸಿಕ್ಕಿರುವ ಅವಕಾಶಗಳನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡಿತು ಎಂದು ತಿಳಿಸಿದ್ದಾರೆ.
ಶಫೀಕ್, ಇಮಾಮ್, ಬಾಬರ್ ವಿಫಲ
ಎಲ್ಲರೂ ಪಾಕ್-ಭಾರತ ಪಂದ್ಯ ನೋಡಿರುತ್ತೀರಿ. ಸುಂದರವಾದ ವಿಕೆಟ್ ಆಗಿತ್ತು. ಪಾಕಿಸ್ತಾನ ಆಟಗಾರರಿಗೆ ಉತ್ತಮ ವೇದಿಕೆ ಸಿಕ್ಕಿತ್ತು. ಶಫೀಕ್, ಇಮಾಮ್, ಬಾಬರ್ ಸೇರಿದಂತೆ ಎಲ್ಲರಿಗೂ ಅದ್ಭುತವಾದ ವೇದಿಕೆ ಈ ಪಂದ್ಯದಿಂದ ಸಿಕ್ಕಿತ್ತು. ಆದರೆ, ನಮ್ಮ ತಂದ ಈ ಅವಕಾಶವನ್ನು ಬಳಸಿಕೊಳ್ಳಲು ಯಶಸ್ವಿಯಾಗಲಿಲ್ಲ. ನಮ್ಮಲ್ಲಿ ಸುದೀರ್ಘ ಇನ್ನಿಂಗ್ಸ್ ಕಟ್ಟುವ ಪ್ರತಿಭೆ ಇಲ್ಲ ಅಂತ ನಾನು ಒಪ್ಪಿಕೊಳ್ಳಬೇಕು ಎಂದರು.
ಇನ್ನೂ ಪಾಕಿಸ್ತಾನ 200 ರನ್ ಗಡಿದಾಡಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ 2 ವಿಕೆಟ್‌ಗೆ 155 ರನ್ ಗಳಿಸಿದ್ದ ಪಾಕ್ ಬಳಿಕ ಕೇವಲ 36 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ 191 ರನ್‌ಗೆ ಸರ್ವಪತನ ಕಂಡಿತು.
What a waste of opportunity on a great batting wicket. Disappointed. Very disappointed. pic.twitter.com/2EnC1z9zni
— Shoaib Akhtar (@shoaib100mph) October 14, 2023