Sunday, January 19, 2025

42 ಕೋಟಿಗೂ ನಮಗೂ ಯಾವುದೇ ಸಂಬಂಧ ಇಲ್ಲ : ಕೆಂಪಣ್ಣ

ಬೆಂಗಳೂರು : ಐಟಿ ದಾಳಿ ವೇಳೆ 42 ಕೋಟಿ ರೂಪಾಯಿ ಸಿಕ್ಕಿರುವುದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಕುಮಾರಸ್ವಾಮಿ ಹೇಳಿದ್ರು, ಇನ್ನೊಬ್ಬರು ಹೇಳಿದ್ರು ನನಗೂ ಸಂಬಂಧ ಇಲ್ಲ. ಕುಮಾರಸ್ವಾಮಿ ರಾಜಕೀಯವಾಗಿ ಎಷ್ಟು ಬೇಕಾದ್ರು ಹೇಳುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಾಧ್ಯಕ್ಷರು ಹಲವಾರು ವ್ಯವಹಾರ ಮಾಡುತ್ತಿದ್ದರು.‌ ಹೋರಾಟ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಹಣ ಬಿಡುಗಡೆ ಮಾಡದೆ ಇದ್ರೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಪೇಮೆಂಟ್ ಐದೂವರೆ ತಿಂಗಳಿಂದ ಆಗಿರಲ್ಲ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ವಿ. ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಏನಾದ್ರೂ ಸಮಸ್ಯೆ ಇದ್ರೆ ಬನ್ನಿ ಎಂದು ಹೇಳಿದ್ದಾರೆ. ನ್ಯಾಯಯುತವಾದ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದೇವೆ. ಅಧಿಕಾರಿಗಳು ಹಣ ಕೇಳುತ್ತಿದ್ದೇವೆ ಅಂತ ಹೇಳಿದ್ದೇವೆ ಎಂದು ಹೇಳಿದರು.

ಕಮಿಷನರ್ ಹಿಂಸೆ ಕೊಡ್ತಿದ್ದಾರೆ

ಇಂಜಿನಿಯರ್ ಮತ್ತು ಬಿಬಿಎಂಪಿ ಕಮಿಷನರ್ ಹಿಂಸೆ ಕೊಡ್ತಿದ್ದಾರೆ ಅಂತ ಹೇಳಿದ್ದೇವೆ‌. ಅವರನ್ನ ಕರೆದು ಮಾತನಾಡುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಈ ವರ್ಷದೊಳಗೆ ಕ್ಲಿಯರ್ ಮಾಡುತ್ತೇವೆ ಎಂದು ಹೇಳಿದ್ದಾರೆ. 50% ಅದ್ರು ತಿಂಗಳು ಆದ್ರು ಬಿಡುಗಡೆ ಮಾಡಿ ಎಂದು ಹೇಳಿದ್ದೇವೆ. ಒಂದು ತಿಂಗಳಲ್ಲಿ ಹಣ ಬಿಡುಗಡೆ ಮಾಡುತ್ತೇವೆ ಅಂತ ಸಿಎಂ ಭರವಸೆ ನೀಡಿದ್ದಾರೆ ಎಂದು ಕೆಂಪಣ್ಣ ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES