ಬೆಂಗಳೂರು : ಐಟಿ, ಇಡಿ ರೇಡ್ಗೆಲ್ಲಾ ನಾವು ಬಗ್ಗೋರಲ್ಲ, ಜಗ್ಗೋರಲ್ಲ. ಗಾಳಿಯಲ್ಲಿ ಗುಂಡು ಹೊಡೆಯೋದಕ್ಕಿಂತ ಸಾಕ್ಷಿ ಕೊಡಿ. ಅಮಿತ್ ಶಾ ಇದಕ್ಕೂ ಅಪಾಯಿಂಟ್ಮೆಂಟ್ ಕೊಡಲ್ವಾ? ವಿಪಕ್ಷ ನಾಯಕನ ಆಯ್ಕೆಗಂತೂ ಅಪಾಯಿಂಟ್ಮೆಂಟ್ ಕೊಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಮನೆ ಒಂದು ಬಾಗಿಲು ನೂರಾಗಿದೆ. ಯಾರು ಲೀಡರ್ ಅಂತ ಗೊತ್ತಾಗ್ತಾನೇ ಇಲ್ಲ ಅವರಿಗೆ. ಅಲ್ಲಿ ಮೈತ್ರಿ ಆಗುತ್ತೆ, ಒಬ್ಬ ಲೀಡರ್ ಆದ್ರೂ ಇದ್ರೇನ್ರೀ.. ಜನತಾದಳ ಜನತೆ ಜೊತೆಯೂ ಇಲ್ಲ, ದಳವಾಗಿಯೂ ಉಳಿದಿಲ್ಲ ಎಂದು ಕುಟುಕಿದರು.
ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳೋದನ್ನ ಬಿಟ್ರೆ, ಬೇರೆ ಏನಾದ್ರೂ ಬಿಜೆಪಿಯವರಿಗೆ ಬರುತ್ತಾ? ಯಾವುದಾದ್ರೂ ಹತ್ತು ಯೋಜನೆಗಳನ್ನು ಹೇಳಲಿ ನೋಡೋಣ. ಸದಾನಂದಗೌಡರು ಹೇಳಿದ್ದಾರೆ, ಕೇಂದ್ರ ಸಚಿವರು ಆಗಿದ್ರು. ಸ್ಟೇಟ್ ಲೀಡರ್ ಶಿಪ್ಗೆ ಬೆನ್ನೆಲುಬೇ ಇಲ್ಲ. ಕಮಿಷನ್, ಕಲೆಕ್ಷನ್ ಗೆಲ್ಲಾ ದಾಖಲೆ ಕೊಡಿ ಸರ್. ನಾವು ದಾಖಲೆ ಇಟ್ಟೇ 40% ಕಮಿಷನ್ ಆರೋಪ ಮಾಡಿದ್ದು. ಪೆನ್ ಡ್ರೈವ್ ಎಲ್ಲೋಯ್ತು ಸರ್? ಎಂದು ಪ್ರಶ್ನಿಸಿದರು.
ಸರ್ಕಾರ ಬೀಳಿಸಿ ನೋಡಲಿ
ಸರ್ಕಾರ ಬೀಳುತ್ತೆ, ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂಬ ವಿಚಾರ ಕುರಿತು ಮಾತನಾಡಿ, ಅವರ ಸರ್ಕಾರ ಉಳಿಸಿಕೊಳ್ಳೋದಕ್ಕೇ ಆಗಲಿಲ್ಲ. ನಮ್ಮ ಸರ್ಕಾರ ಎಲ್ಲಿ ಬೀಳಿಸ್ತಾರೆ? ಅವರಿಗೊಬ್ಬರಿಗೇ ಬರುತ್ತಾ ರಾಜಕೀಯ ಮಾಡೋಕೆ. ಸರ್ಕಾರ ಬೀಳಿಸಿ ನೋಡಲಿ. ಆಪರೇಶನ್ ಹಸ್ತ ನಮಗೆ ಅವಶ್ಯಕತೆಯೇ ಇಲ್ಲ. ಅವ್ರೇ ಪಕ್ಷ ಬಿಟ್ಟು ಬರ್ತಾ ಇದ್ದಾರೆ. ಸರ್ಕಾರ ಬೀಳಿಸಲು ಸರ್ಕಸ್ ಮಾಡ್ತಿರಬಹುದು ಎಂದು ಟಾಂಗ್ ಕೊಟ್ಟರು.
ಹುಡುಗರ ರೀತಿ ಮಾತಾಡಬಾರದು
ತೆಲಂಗಾಣದಲ್ಲಿ ಬಿಜೆಪಿಗೆ ಅಡ್ರೆಸ್ಸೇ ಇಲ್ಲ. ಕುಮಾರಸ್ವಾಮಿ ಮೋಸ್ಟ್ ವಿಪಕ್ಷ ನಾಯಕ ಆಗಿಬಿಟ್ಟಿದ್ದಾರೆ, ಅದಕ್ಕೆ ಮಾತಾಡ್ತಿದ್ದಾರೆ. ಘಟಾನುಘಟಿ ಲೀಡರ್ ಗಳು ಮಾತಾಡಬೇಕಾದ್ರೆ ತೂಕ ಇರಬೇಕು. ಹುಡುಗರ ರೀತಿ ಮಾತಾಡಬಾರದು ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.