Thursday, December 19, 2024

ಭಗವಾನ್ ಅವನೊಬ್ಬ ಮೆಂಟಲ್ ಗಿರಾಕಿ, ತಲೆ ತಿರುಕ : ಎನ್. ರವಿಕುಮಾರ್

ಬೆಂಗಳೂರು : ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಚಿಂತಕ ಪ್ರೊ.ಕೆ.ಎಸ್‌ ಭಗವಾನ್ ವಿವಾದಾತ್ಮಕ ಹೇಳಿಕೆಗೆ ವಿಧಾನ ಪರಿಷತ್​ ಸದಸ್ಯ ಎನ್​. ರವಿಕುಮಾರ್​ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾವನೋ ಒಬ್ಬ ತಲೆ ತಿರುಕ ಭಗವಾನ್ ಅಂತ ಒಕ್ಕಲಿಗರ ಬಗ್ಗೆ ಮಾತಾಡಿದ್ದಾನೆ. ಅವನೊಬ್ಬ ಮೆಂಟಲ್ ಗಿರಾಕಿ ಎಂದು ಕುಟುಕಿದರು.

ಅವಹೇಳನಕಾರಿಯಾಗಿ ಮಾತನಾಡಿ ಒಕ್ಕಲಿಗ ಜನಾಂಗಕ್ಕೆ ಅವಮಾನ ಮಾಡಿದ್ದಾರೆ. ನಾನು ನಮ್ಮ‌ ಸ್ವಾಮೀಜಿ ಜೊತೆ ಮಾತಾಡುತ್ತೇನೆ. ಇದರ ಹಿಂದೆ ಯಾರು ಇದ್ದಾರೆ? ಭಗವಾನ್ ಕಾರ್ಯಕ್ರಮಕ್ಕೆ ಹೋಗುವವರು ಎಲ್ಲಾ ಕಾಂಗ್ರೆಸ್ ನವರೇ.. ರಕ್ಷಣೆ ಕೊಡುವವರೂ‌ ಕಾಂಗ್ರೆಸ್ ನವರು, ಬೆಂಬಲ ಕೊಡುವವರೂ ಕಾಂಗ್ರೆಸ್ ನವರು ಎಂದು ಕಾಂಗ್ರೆಸ್​ ವಿರುದ್ಧವೂ ಆಕ್ರೋಶ ಹೊರಹಾಕಿದರು.

ಈ ಸುದ್ದಿ ಓದಿದ್ದೀರಾ? : ರಾಮ ತುಂಬು ಗರ್ಭಿಣಿಯನ್ನು ಕಾಡಿಗೆ ಓಡಿಸಿದ : ಪ್ರೊ. ಕೆ.ಎಸ್. ಭಗವಾನ್

ಈಗ ಭಗವಾನ್ ಹೇಳಿಕೆಗೆ ಕಾಂಗ್ರೆಸ್ ಉತ್ತರಿಸಬೇಕು. ಕೂಡಲೇ ಅವನನ್ನು ಬಂಧಿಸಿ ಜೈಲಿಗಟ್ಟಬೇಕು. ಇಲ್ಲದಿದ್ದರೆ ಇದು ದೊಡ್ಡ ಗಲಾಟೆಗೆ ನಾಂದಿಯಾಗುತ್ತದೆ. ಒಕ್ಕಲಿಗ ಸಮುದಾಯ ಶಾಂತಿಯಿಂದ ಇದ್ದಾರೆ. ಅಶಾಂತಿಗೆ ದೂಡಲು ಇದು ಕಾರಣ ಆಗುತ್ತದೆ ಎಂದು ಎನ್​. ರವಿಕುಮಾರ್ ಎಚ್ಚರಿಕೆ ಸಂದೇಶ ನೀಡಿದರು.

RELATED ARTICLES

Related Articles

TRENDING ARTICLES