Wednesday, January 22, 2025

ಪಾಕ್ ಧ್ವಂಸ.. ಭಾರತಕ್ಕೆ 192 ರನ್​ಗಳ ಸಾಧಾರಣ ಟಾರ್ಗೆಟ್

ಬೆಂಗಳೂರು : ಆರಂಭಿಕ ಆಘಾತ.. 300 ಗಡಿ ದಾಟುವ ಮುನ್ಸೂಚನೆ ಕೊಟ್ಟ ಪಾಕ್.. ಎದೆಗುಂದಂದೆ ಶಿಸ್ತುಬದ್ದ ದಾಳಿ ಮುಂದುವರಿಸಿದ ಭಾರತ.. ಪರಿಣಾಮ ಬೂಮ್ರಾ, ಸಿರಾಜ್, ಕುಲ್​ದೀಪ, ಜಡೇಜಾ ಹಾಗೂ ಪಾಂಡ್ಯ ಬಾಳಿಗೆ ಪಾಕ್​ ಧ್ವಂಸ.

ವಿಶ್ವಕಪ್​-2023ರ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಬದ್ದವೈರಿ ಪಾಕಿಸ್ತಾನ ಸಾಧಾರಣ ಟಾರ್ಗೆಟ್ ಕಲೆಹಾಕಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್​ 42.5 ಓವರ್​ಗಳಲ್ಲಿ 191 ರನ್​ಗಳಿಗೆ ಸರ್ವಪತನ ಕಂಡಿತು.

ಪಾಕಿಸ್ತಾನ ಪರ ಬಾಬರ್ ಅಜಮ್ ಅರ್ಧಶತಕ ಸಿಡಿಸಿದರು. ರಿಜ್ವಾನ್ 49 ರನ್​ ಗಳಿಸಿ ಅರ್ಧಶತಕ ವಂಚಿತರಾದರು. ಇಮಾಮ್ 36 ಹಾಗೂ ಶಫೀಕ್ 20 ರನ್​ ಗಳಿಸಿದರು. ಉಳಿದಂತೆ ಭಾರತದ ಬೌಲಿಂಗ್ ದಾಳಿಗೆ ಪಾಕ್​ ಬ್ಯಾಟರ್​ಗಳು ಪೆವಿಲಿಯನ್ ಪೆರೇಡ್​ ನಡೆಸಿದರು. ಭಾರತದ ಪರ ಸಿರಾಜ್, ಬುಮ್ರಾ, ಕುಲ್ದೀಪ್ ಯಾದವ್, ಜಡೇಜಾ ಹಾಗೂ ಪಾಂಡ್ಯ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES