ಬೆಂಗಳೂರು : ಮಾತು ಎತ್ತಿದರೆ ಡಿಕೆ ಡಿಕೆ ಅಂತಾರೆ. ಬಾಯಿಗೆ ಬಂದಂಗೆ ಮಾತನಾಡ್ತಾರೆ ಅಂದರೆ ನಮಗೂ ಜೋರಾಗಿ ಮಾತನಾಡೋಕೆ ಬರುತ್ತೆ. ಸೋತು ಸುಣ್ಣ ಆಗಿರೋರು ಹೀಗೆ ಮಾತನಾಡ್ತಾ ಇದ್ದಾರೆ. ಅವರ ಬ್ರಹ್ಮಾಂಡದ ದುಡ್ಡು ಇರಬೇಕು ಅದು. ಅದಕ್ಕೆ ಹೀಗೆ ಮಾತನಾಡ್ತಾ ಇದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಕುಟುಕಿದರು.
ಐಟಿ ರೇಡ್ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಆರೋಪ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಜಿ.ಟಿ ದೇವೇಗೌಡರು ಯಾವ ನೈತಿಕತೆ ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಆರೋಪ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಕುಮಾರಸ್ವಾಮಿ ಅವರನ್ನ ಓಲೈಸೋದಕ್ಕೆ ಹೀಗೆ ಮಾತನಾಡ್ತಾ ಇದ್ದಾರೇನೊ ಎಂದು ಚಾಟಿ ಬೀಸಿದರು.
ಬಿಜೆಪಿ ಅಥವಾ ಜೆಡಿಎಸ್ ಇರಬಹುದು. ಯಾವುದೇ ವಿಚಾರವನ್ನು ಡಿ.ಕೆ ಶಿವಕುಮಾರ್ ಅವರಿಗೆ ಕನೆಕ್ಟ್ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಅವರಿಗೆ ಮಾಡೋಕೆ ಏನೂ ಕೆಲಸ ಇಲ್ಲ. ಬಹುಶಃ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಕೈ ಜೋಡಿಸಿರೋದು ಇದಕ್ಕೆ ಇರಬೇಕು ಎಂದು ಟಾಂಗ್ ಕೊಟ್ಟರು.
10 ವರ್ಷ ಮನೆಯಲ್ಲಿ ಇರಲಿಲ್ವಾ?
ಪಂಚರಾಜ್ಯ ಚುನಾವಣೆಗೂ ನನಗೂ ಸಂಬಂಧ ಇಲ್ಲ. ಕೇಂದ್ರ ನಾಯಕರು, ಐಟಿ ಅಧಿಕಾರಿಗಳ ಬಳಿ ಮಾಹಿತಿ ನೀವು ಪಡೆಯಬೇಕು. ಅಧಿಕಾರದಲ್ಲಿ ಇದ್ದೀವಿ ಅಂತ ಹೀಗೆ ಆರೋಪ ಮಾಡ್ತಾ ಇದ್ದಾರೆ. 10 ವರ್ಷ ಮನೆಯಲ್ಲಿ ಇರಲಿಲ್ವಾ? ಮೋದಿಯ ಸರ್ವಾಧಿಕಾರಿ ಆಡಳಿತ ನೋಡಿಕೊಂಡು ಇರಲಿಲ್ವಾ? ಸೋತವರು ತಾಳ್ಮೆಯಿಂದ ಇರಬೇಕು. ಸೈದ್ಧಾಂತಿಕವಾಗಿ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ಡಿ.ಕೆ ಸುರೇಶ್ ಹೇಳಿದರು.