Thursday, January 23, 2025

ಇವಿಎಂ ಬಳಕೆಯಿಂದ ಪಾರದರ್ಶಕತೆ ಹಾಗೂ ದಕ್ಷತೆ ಎರಡೂ ಹೆಚ್ಚಿದೆ : ಪ್ರಧಾನಿ ಮೋದಿ

ನವದೆಹಲಿ : ಇವಿಎಂ ಬಳಕೆಯಿಂದ ಚುನಾವಣೆಗಳಲ್ಲಿ ಪಾರದರ್ಶಕತೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷತೆ ಎರಡೂ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

9ನೇ ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದಲಾದ ಕಾಲಾನಂತರದಲ್ಲಿ ಭಾರತ ಆಧುನಿಕ ತಂತ್ರಜ್ಞಾನದೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ಸಂಪರ್ಕಿಸಿದೆ. ಭಾರತವು ಸುಮಾರು 25 ವರ್ಷಗಳಿಂದ ಇವಿಎಂ ಬಳಸುತ್ತಿದೆ ಎಂದರು.

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲು ನಾವು ನಿರ್ಧರಿಸಿದ್ದೇವೆ. ದೇಶದಲ್ಲಿ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತಿದ್ದೇವೆ. ಇತ್ತೀಚಿನ ನಿರ್ಧಾರವು ಸಂಸದೀಯ ಸಂಪ್ರದಾಯವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ ಎಂದು ಹೇಳಿದರು.

ಕ್ರೀಡಾಪಟುಗಳಿಗೆ ಮಾಸಿಕ 50,000 ನೆರವು

ದೇಶದಲ್ಲಿ ಯುವಕರಿಗಾಗಿ ಟಾಪ್ಸ್ (TOPS) ಸ್ಕೀಮ್ ಮತ್ತು ಖೇಲೋ ಇಂಡಿಯಾ ಗೇಮ್ಸ್‌ನಂತಹ ಯೋಜನೆಗಳನ್ನು ನೀಡುತ್ತಿದ್ದೇವೆ. ಇಂದು ಟಾಪ್ಸ್ ಯೋಜನೆಯಡಿ ನೂರಾರು ಕ್ರೀಡಾಪಟುಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ತರಬೇತಿ ಸೌಲಭ್ಯ ಒದಗಿಸಲಾಗಿದೆ. ಖೇಲೋ ಇಂಡಿಯಾ ಗೇಮ್ಸ್ ಅಡಿಯಲ್ಲಿ 3 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಮಾಸಿಕ 50,000 ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದು ಶಾಂತಿ ಮತ್ತು ಭ್ರಾತೃತ್ವದ ಸಮಯ

ಯಾವುದೇ ದೇಶದ ಬಹುದೊಡ್ಡ ಶಕ್ತಿಯು ಜನರಲ್ಲಿ, ಜನರ ಆಕಾಂಕ್ಷೆಗಳಲ್ಲಿದೆ. ಇಂದು ಈ P20 ಶೃಂಗಸಭೆಯು ಜನರ ಶಕ್ತಿಯನ್ನು ಆಚರಿಸುವ ಸಾಧನವಾಗಿ ಮಾರ್ಪಟ್ಟಿದೆ. ಇಂದು ವಿಶ್ವ ಘರ್ಷಣೆಗಳನ್ನು ಎದುರಿಸುತ್ತಿದೆ. ಇದು ಶಾಂತಿ ಮತ್ತು ಭ್ರಾತೃತ್ವದ ಸಮಯ, ಒಟ್ಟಿಗೆ ಮುಂದೆ ಸಾಗುವ ಸಮಯ ಎಂದು ಪ್ರಧಾನಿ ಮೋದಿ ಹೇಳಿದರು.

RELATED ARTICLES

Related Articles

TRENDING ARTICLES