Wednesday, January 22, 2025

ಇದು ವಸೂಲಿ ದುಡ್ಡು.. ಕಿಕ್ ಬ್ಯಾಕ್ ದುಡ್ಡು.. ಕಮಿಷನ್ ದುಡ್ಡು : ಅಶ್ವತ್ಥ ನಾರಾಯಣ

ಬೆಂಗಳೂರು : ಐಟಿ ದಾಳಿ ವೇಳೆ ಕಾಂಗ್ರೆಸ್ ನಾಯಕಿಯ ಪತಿ ಮನೆಯಲ್ಲಿ 42 ಕೋಟಿ ಪತ್ತೆಯಾಗಿರುವ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥ ನಾರಾಯಣ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಇದು ವಸೂಲಿ ದುಡ್ಡು.. ಕಮಿಷನ್ ದುಡ್ಡು ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಟಿಎಂ ಸರ್ಕಾರ ಅಂತ ಆಗಿದ್ದ ಆರೋಪ ಈಗ ಸಾಕ್ಷಿ ಸಮೇತ ಗೊತ್ತಾಗಿದೆ. ಕಲೆಕ್ಷನ್ ಮಾಡಿರುವ ಸಣ್ಣ ಮೊತ್ತ ಸಿಕ್ಕಿದೆ. ಇನ್ನೂ ಬಹಳಷ್ಟು ಕಡೆ‌ ಇರುತ್ತದೆ. ಇದೆಲ್ಲಾ ಕಿರುಕುಳ ಕೊಟ್ಟು, ಹೆದರಿಸಿ ಕಲೆಕ್ಷನ್ ಮಾಡಿರುವ ದುಡ್ಡು ಎಂದು ಆರೋಪಿಸಿದ್ದಾರೆ.

ಇದೆಲ್ಲಾ ಯಾರ ಹಣ ಅಂತ ಗುತ್ತಿಗೆದಾರರು ಹೇಳಬೇಕು. ಏನು ಚಿತ್ರಹಿಂಸೆ ಕೊಟ್ಟು ವಸೂಲಿ ಮಾಡಿದ್ದಾರೆ ಅಂತಾ ಗುತ್ತಿಗೆದಾರರು ಹೇಳಬೇಕು. ಅಲ್ಪಾವಧಿಯಲ್ಲೇ ಬಹಳಷ್ಟು ಹಣ ಲೂಟಿ ಮಾಡಿದ್ದಕ್ಕೆ ಇದು ಸಾಕ್ಷಿ. ಇನ್ನೂ ದುಡ್ಡಿನ ರಾಶಿ ಎಲ್ಲೆಲ್ಲಿ ಇದೆ ಅಂತ ನೋಡಬೇಕು. ನಮ್ಮ ಸರ್ಕಾರದ ಮೇಲೆ ಆಧಾರವಿಲ್ಲದೇ ಆರೋಪ ಮಾಡಿದ್ರು. ಅಂಬಿಕಾಪತಿ ಅಂದು ಆಪಾದನೆ ಮಾಡಿದವರಲ್ಲಿ ಒಬ್ಬರಾಗಿದ್ದಾರೆ, ಆದರೆ ಇಂದು ದುಡ್ಡು ಎಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದು ಕಿಕ್ ಬ್ಯಾಕ್ ದುಡ್ಡು, ವಸೂಲಿ ದುಡ್ಡು

ಕಾಂಗ್ರೆಸ್ ನವರು ಹೇಗೆ ಹಿಂಡುತ್ತಾರೆ? ಹೇಗೆ ಏಟು ಹೊಡೆಯುತ್ತಾರೆ ಅಂತ ಗುತ್ತಿಗೆದಾರರು, ಅಧಿಕಾರಿಗಳಿಗೆ ಗೊತ್ತಾಗಿದೆ. ಯಾವುದಾದರೂ ಗುತ್ತಿಗೆದಾರರ ಹತ್ತಿರ ಕ್ಯಾಶ್ ಹೇಗೆ ಬರುತ್ತದೆ? ಇದು ಕಿಕ್ ಬ್ಯಾಕ್ ದುಡ್ಡು, ವಸೂಲಿ ದುಡ್ಡು, ಕಮಿಷನ್ ದುಡ್ಡು ಎಂದು ಅಶ್ವತ್ಥ ನಾರಾಯಣ ಗಂಭೀರ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES