Thursday, November 21, 2024

ಮಹಿಷಾಸುರನಲ್ಲಿ ದೇವರು ಇಲ್ವಾ? : ಜ್ಞಾನಪ್ರಕಾಶ ಸ್ವಾಮೀಜಿ

ಮೈಸೂರು : ಸಕಲ ಜೀವಿಗಳು, ವಸ್ತುಗಳಲ್ಲಿ ದೇವರು ಇದ್ದಾರೆ ಅಂತೀರಾ. ಆಗಿದ್ರೆ, ಮಹಿಷಾಸುರನಲ್ಲಿ‌ ದೇವರು‌ ಇಲ್ವಾ? ನಿಮ್ಮದು ಎಂಥಹ ಮಾತು ಸ್ವಾಮಿ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಮಠಾಧೀಶರಾದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಮಹಿಷ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರವೇ ಮಹಿಷ ಉತ್ಸವಕ್ಕೆ ಅವಕಾಶ ನೀಡಿದೆ ಎಂದರು.

ಕೊಂದವರಿಗೆ 302 ಕೇಸ್ ಇದೆ. ಕೊಂದವರನ್ನು ವಿಜೃಂಭಣೆಯಿಂದ ಆಚರಣೆ ಮಾಡ್ತಾರೆ. ಕೊಲ್ಲಿಸಿಕೊಂಡವರಿಗೆ ಯಾಕೆ ಆಚರಣೆ ಯಾಕೆ ಬೇಡ? ನಮಗೆ ಪೆನ್ನಿನ ಸಂಸ್ಕೃತಿ ಬೇಕು, ಬಂದೂಕಿನ ಸಂಸ್ಕೃತಿ ಬೇಡ. ನಾವು ಯಾವುದೇ ಹಬ್ಬಕ್ಕೆ ಚ್ಯುತಿ ತರಲ್ಲ. ನಮಗೆ ಮನುವಾದಿಗಳ ಹಬ್ಬ ಬೇಡ. ಅದಕ್ಕಾಗಿ‌ ಮಹಿಷ ಉತ್ಸವ ಮಾಡ್ತಾ ಇದೀವಿ ಎಂದು ತಿಳಿಸಿದರು.

ಇವ್ರು ಎಂಥ ಜನಪ್ರತಿನಿಧಿ ಸ್ವಾಮಿ?

ಈ ದಿನ ಐತಿಹಾಸಿಕ ಕ್ಷಣವಾಗಿದೆ. ಮಹಿಷ ಮಂಡಲವನ್ನು ರಾಜ್ಯ ದೇಶ ತಿರುಗಿ ನೋಡುತ್ತಿದೆ. ಇದಕ್ಕೆ ನಾನೊನ್ನಬರಿಗೆ ದೊಡ್ಡ ಧನ್ಯವಾದ ಹೇಳುತ್ತೇನೆ ಎಂದು ಹೆಸರು ಹೇಳದೆಯೇ ಸಂಸದ ಪ್ರತಾಪ್ ಸಿಂಹಗೆ ಧನ್ಯವಾದ ಎಂದರು. ಮಹಿಷ ಮಂಡಲ ಎಲ್ಲರಿಗೂ‌ ತಿಳಿಯಿತು. ನಮಗೆ ಇತಿಹಾಸ ಗೊತ್ತು ಈ ರೀತಿ ಎಲ್ಲಾ ಮಾಡತಾಡಬೇಕು. ಮಹದೇಶ್ವರ ಬೆಟ್ಟ, ಚುಂಚನಗಿರಿಗೆ ಹೋಗಿ ಏನ್ ಮಾಡ್ತಾರೋ‌ ಇವರು ಅಂತ ಒಬ್ಬರು ಹೇಳ್ತಾರೆ. ಇವರು ಎಂತಹ ಜನಪ್ರತಿನಿಧಿ ಸ್ವಾಮಿ? ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES