Monday, December 23, 2024

10 ಲಕ್ಷ ಪಡೆಯುತ್ತಿದ್ದ ಐಟಿ ಅಧಿಕಾರಿ ಪೊಲೀಸರ ಬಲೆಗೆ

ಬೆಂಗಳೂರು : ಬೆಳಗಾವಿ ಮಹಾನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಸಿನಿಮೀಯ ರೀತಿಯಲ್ಲಿ ಪ್ಲ್ಯಾನ್ ಮಾಡುವ ಮೂಲಕ ಐಟಿ ಅಧಿಕಾರಿಯನ್ನೇ ಖೆಡ್ಡಾಕ್ಕೆ ಕೆಡವಿದ್ದಾರೆ.

ಐಟಿ ಅಧಿಕಾರಿ ಅವಿನಾಶ್ ಟೊನಪೆ ಪೊಲೀಸರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. ಈತ ಬರೋಬ್ಬರಿ 10 ಲಕ್ಷ ರೂಪಾಯಿ ಲಂಚ ಪಡೆಯುವಾಗ ಪೊಲೀಸರ ಅತಿಥಿಯಾಗಿದ್ದಾನೆ.

ಹಣ ನೀಡುವಂತೆ ಚಿನ್ನದ ಅಂಗಡಿ ಮಾಲೀಕರಾದ ಚಿಕ್ಕೋಡಿ ತಾಲೂಕಿನ ಅಂಕಲಿಯ ಪರುಶುರಾಮ ಬಂಕಾಪುರ ಎಂಬುವವರಿಗೆ ಐಟಿ ಅಧಿಕಾರಿ ಅವಿನಾಶ್ ಟೊನಪೆ ಅವರು ಕಿರುಕುಳ ಕೊಟ್ಟಿದ್ದರು. ಬರೋಬ್ಬರಿ 10 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು.

ಈ ಸುದ್ದಿ ಓದಿದ್ದೀರಾ? : ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ : ಶಾಸಕ ಯತ್ನಾಳ್

ಈ ಬಗ್ಗೆ ಪರಶುರಾಮ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿ ಮೇರೆಗೆ 10 ಲಕ್ಷ ಹಣವನ್ನು ತೆಗೆದುಕೊಳ್ಳುವಾಗ ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಅಧಿಕಾರಿಯನ್ನು ಹಣದ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

RELATED ARTICLES

Related Articles

TRENDING ARTICLES